ಏಶ್ಯನ್ ಗೇಮ್ಸ್| ಫುಟ್ಬಾಲ್: 16ರ ಸುತ್ತಿನಲ್ಲಿ ಭಾರತಕ್ಕೆ 2-0 ಸೋಲುಣಿಸಿದ ಸೌದಿ

Update: 2023-09-28 18:18 GMT

Photo: twitter/FExpressIndia

ಹಾಂಗ್‍ಝೌ (ಚೀನಾ): ಚೀನಾದ ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಗುರುವಾರ ಪುರುಷರ ಫುಟ್ಬಾಲ್ ಪ್ರಿಕ್ವಾರ್ಟರ್‍ ಫೈನಲ್‍ನಲ್ಲಿ ಸೌದಿ ಅರೇಬಿಯವು ಭಾರತವನ್ನು 2-0 ಗೋಲುಗಳಿಂದ ಸೋಲಿಸಿದೆ.

ಸೌದಿ ಅರೇಬಿಯದ ಪರವಾಗಿ ಎರಡೂ ಗೋಲುಗಳನ್ನು ಮುಹಮ್ಮದ್ ಖಲೀಲ್ ಮರ್ರನ್ ಬಾರಿಸಿದರು.

ಪಂದ್ಯವು ಉತ್ತಮ ಪೈಪೋಟಿಯೊಂದಿಗೆ ಆರಂಭವಾಯಿತು. ಪ್ರಥಮಾರ್ಧದಲ್ಲಿ ತಂಡಗಳಿಗೆ ಯಾವುದೇ ಗೋಲನ್ನು ಗಳಿಸಲು ಸಾಧ್ಯವಾಗಲಿಲ್ಲ. ಪ್ರಥಮಾರ್ಧವು 0-0 ಯೊಂದಿಗೆ ಮುಕ್ತಾಯಗೊಂಡಿತು.

ಆದರೆ, ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಬದಲಾಯಿತು. ಮರ್ರನ್ 51ನೇ ನಿಮಿಷದಲ್ಲಿ ತಂಡದ ಪ್ರಥಮ ಗೋಲನ್ನು ಬಾರಿಸಿದರು. ಬಳಿಕ 57ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಭಾರತಕ್ಕೆ ಕೊನೆಯವರೆಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಅದು ಏಶ್ಯನ್ ಗೇಮ್ಸ್ ನಿಂದ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News