ಏಶ್ಯನ್ ಅಂಡರ್-18 ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್ | 5,000 ಮೀ. ರೇಸ್ ವಾಕ್: ಭಾರತದ ನಿತಿನ್ ಗುಪ್ತಾಗೆ ಬೆಳ್ಳಿ

Update: 2025-04-16 21:29 IST
Nitin Gupta

 ನಿತಿನ್ ಗುಪ್ತಾ | PC : X \ @afiindia

  • whatsapp icon

ಹೊಸದಿಲ್ಲಿ: ಸೌದಿ ಅರೇಬಿಯದ ದಮ್ಮಾಮ್‌ನಲ್ಲಿ ಬುಧವಾರ ನಡೆದ 6ನೇ ಆವೃತ್ತಿಯ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ 5,000 ಮೀ. ರೇಸ್‌ವಾಕ್ ಸ್ಪರ್ಧಾವಳಿಯಲ್ಲಿ ಭಾರತದ ನಿತಿನ್ ಗುಪ್ತಾ ಬೆಳ್ಳಿ ಪದಕ ಜಯಿಸಿದ್ದಾರೆ.

ನಿತಿನ್ 20:21.51 ಸೆಕೆಂಡ್‌ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ಚೀನಾದ ಝು ನಿಂಗ್‌ಹಾವೊ 20:21.50 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿದರು. ಚೈನೀಸ್ ತೈಪೆಯ ಶೆಂಗ್ ಕ್ಸಿನ್ ಲೊ(21:37.88 ಸೆ.)ಕಂಚಿನ ಪದಕ ಜಯಿಸಿದರು.

ಕಳೆದ ತಿಂಗಳು ಪಾಟ್ನಾದಲ್ಲಿ ನಡೆದಿದ್ದ ನ್ಯಾಶನಲ್ ಯೂತ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ(19:24.48 ಸೆ.)ಗುರಿ ತಲುಪಿದ್ದ 17ರ ಹರೆಯದ ನಿತಿನ್ ತನ್ನದೇ ರಾಷ್ಟ್ರೀಯ ದಾಖಲೆ ಮುರಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News