ಆಸ್ಟ್ರೇಲಿಯದ ವಿರುದ್ಧ ಸರಣಿ | ಬಾಬರ್ , ಶಾಹೀನ್, ನಸೀಂ ಪಾಕಿಸ್ತಾನ ತಂಡಕ್ಕೆ ವಾಪಸ್
ಹೊಸದಿಲ್ಲಿ : ಮುಂಬರುವ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಸೀಮಿತ ಓವರ್ ಸರಣಿಗೆ ಮಾಜಿ ನಾಯಕ ಬಾಬರ್ ಆಝಮ್ ಅವರು ವೇಗಿಗಳಾದ ಶಾಹೀನ್ ಶಾ ಅಫ್ರಿದಿ ಹಾಗೂ ನಸೀಂ ಶಾ ಅವರೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ.
ಈ ಮೂವರನ್ನು ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಂದ ಹೊರಗಿಡಲಾಗಿತ್ತು. ಪಾಕಿಸ್ತಾನದ ಆಯ್ಕೆ ಸಮಿತಿಯು ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯ ಹಾಗೂ ಝಿಂಬಾಬ್ವೆ ವಿರುದ್ಧದ ಏಕದಿನ ಅಂತರ್‌ರಾಷ್ಟ್ರೀಯ ಹಾಗೂ ಟಿ-20 ಪಂದ್ಯಗಳಿಗೆ ತಂಡಗಳನ್ನು ಪ್ರಕಟಿಸಿದೆ.
ತಂಡಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಹಿರಿಯ ಆಟಗಾರರಾದ ಫಖರ್ ಝಮಾನ್ ಹಾಗೂ ಶಾದಾಬ್ ಖಾನ್ ಅನುಪಸ್ಥಿತಿ ಇದೆ. ಆಸ್ಟ್ರೇಲಿಯದಲ್ಲಿ ನಡೆಯಲಿರುವ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ನಂತರ ಬಾಬರ್, ಶಾಹೀನ್ ಹಾಗೂ ನಸೀಂರನ್ನು ಬದಿಗೆ ಸರಿಸಲಾಗಿತ್ತು. ಇದೀಗ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯ ಪ್ರವಾಸವು ನವೆಂಬರ್ 4ರಿಂದ 18ರ ತನಕ ನಡೆಯಲಿದೆ.
3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಯು ಝಿಂಬಾಬ್ವೆಯ ಬುಲಾವಯೊದಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರ ತನಕ ನಡೆಯಲಿದೆ.
ಪಾಕಿಸ್ತಾನ ತಂಡವು 3 ಏಕದಿನ, ಮೂರು ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಡಿಸೆಂಬರ್ ಹಾಗೂ ಜನವರಿಯಲ್ಲಿ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲು ಸಜ್ಜಾಗುತ್ತಿದೆ.
► ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಗೆ ಪಾಕಿಸ್ತಾನ ತಂಡ:
ಆಮಿರ್ ಜಮಾಲ್, ಅಬ್ದುಲ್ಲಾ ಶಫೀಕ್, ಅರಾಫತ್ ಮಿನ್ಹಾಸ್, ಬಾಬರ್ ಆಝಮ್, ಫೈಸಲ್ ಅಕ್ರಂ, ಹಾರಿಸ್ ರವೂಫ್, ಹಸೀಬುಲ್ಲಾ(ವಿಕೆಟ್ ಕೀಪರ್), ಕಾಮ್ರಾನ್ ಗುಲಾಮ್, ಮುಹಮ್ಮದ್ ಹಸನೈನ್, ಮುಹಮ್ಮದ್ ರಿಝ್ವಾನ್(ವಿಕೆಟ್ ಕೀಪರ್), ಮುಹಮ್ಮದ್ ಇರ್ಫಾನ್ ಖಾನ್, ನಸೀಂ ಶಾ, ಸಯೀಮ್ ಅಯ್ಯೂಬ್, ಸಲ್ಮಾನ್ ಅಲಿ ಅಘಾ ಹಾಗೂ ಶಾಹೀನ್ ಶಾ ಅಫ್ರಿದಿ.
► ಆಸ್ಟ್ರೇಲಿಯ ವಿರುದ್ಧ ಟಿ-20 ಸರಣಿಗೆ ಪಾಕ್ ತಂಡ:
ಅರಾಫತ್ ಮಿನ್ಹಾಸ್, ಬಾಬರ್ ಆಝಮ್, ಹಾರಿಸ್ ರವೂಫ್, ಹಸೀಬುಲ್ಲಾ, ಜಹಾಂದಾದ್ ಖಾನ್, ಮುಹಮ್ಮದ್ ಅಬ್ಬಾಸ್ ಅಫ್ರಿದಿ, ಮುಹಮ್ಮದ್ ರಿಝ್ವಾನ್(ವಿಕೆಟ್ ಕೀಪರ್), ಮುಹಮ್ಮದ್ ಇರ್ಫಾನ್ ಖಾನ್, ನಸೀಂ ಶಾ, ಒಮೈರ್ ಬಿನ್ ಯೂಸುಫ್, ಸಾಹಿಬ್‌ಝಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ, ಶಾಹೀನ್ ಶಾ ಅಫ್ರಿದಿ, ಸುಫ್‌ಯಾನ್ ಮೊಖಿಮ್ ಹಾಗೂ ಉಸ್ಮಾನ್ ಖಾನ್.