ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ; ಮರಳಿದ ಶ್ರೇಯಸ್ ಅಯ್ಯರ್‌, ಇಶಾನ್ ಕಿಶನ್; ಟಾಪ್‌ ಗ್ರೇಡ್‌ನಲ್ಲಿ ರೋಹಿತ್, ಕೊಹ್ಲಿ

Update: 2025-04-21 13:53 IST
ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ; ಮರಳಿದ ಶ್ರೇಯಸ್ ಅಯ್ಯರ್‌, ಇಶಾನ್ ಕಿಶನ್; ಟಾಪ್‌ ಗ್ರೇಡ್‌ನಲ್ಲಿ ರೋಹಿತ್, ಕೊಹ್ಲಿ

Photo credit: PTI

  • whatsapp icon

ಮುಂಬೈ: 2024-25ರ ಸಾಲಿನ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ಕಳೆದ ಬಾರಿ ದೇಶೀಯ ಕ್ರಿಕೆಟ್ ನಲ್ಲಿ ಆಡಲು ನಿರಾಕರಿಸಿದ ಕಾರಣಕ್ಕೆ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದ ಶ್ರೇಯಸ್‌ ಅಯ್ಯರ್‌ ಮತ್ತು ಇಶಾನ್‌ ಕಿಶನ್‌ ಈ ಬಾರಿ ಸ್ಥಾನ ನೀಡಲಾಗಿದೆ.

ಕಳೆದ ಬಾರಿ 30 ಮಂದಿ ಆಟಗಾರರು ಇದ್ದರು. ಈ ಬಾರಿ ಒಟ್ಟು 34 ಆಟಗಾರರು ಈ ಬಾರಿಯ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರು A+ ದರ್ಜೆಯಲ್ಲಿಯೇ ಮುಂದುವರಿದಿದ್ದಾರೆ. ಕಳೆದ ವರ್ಷದವರೆಗೆ ಬಿ ಗ್ರೇಡ್‌ ನಲ್ಲಿದ್ದ ರಿಷಭ್ ಪಂತ್ ಅವರನ್ನು ಎ ಗ್ರೇಡ್‌ ಗೆ ಬಡ್ತಿ ನೀಡಲಾಗಿದೆ.

ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಭಿಶೇಕ್‌ ಶರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷಿತ್‌ ರಾಣಾ ಅವರು ಇದೇ ಮೊದಲ ಬಾರಿಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ಸಿ ಗ್ರೇಡ್‌ ನಲ್ಲಿ ಸ್ಥಾನ ನೀಡಲಾಗಿದೆ.

ಹೊಸ ಗುತ್ತಿಗೆ ಪಟ್ಟಿಯ ಪ್ರಕಾರ, ಎ ಗ್ರೇಡ್‌ ನಲ್ಲಿ ಕೆ ಎಲ್‌ ರಾಹುಲ್‌, ಮುಹಮ್ಮದ್‌ ಸಿರಾಜ್‌, ಮುಹಮ್ಮದ್‌ ಶಮಿ, ಶುಭಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ ಮತ್ತು ರಿಷಭ್‌ ಪಂತ್‌ ಇದ್ದಾರೆ.

ಬಿ ಗ್ರೇಡ್‌ ನಲ್ಲಿ ಸೂರ್ಯಕುಮಾರ್‌ ಯಾದವ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಯಶಸ್ವಿ ಜೈಸ್ವಾಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ನೂತನ ಗುತ್ತಿಗೆ ಪಟ್ಟಿ:

A+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ

A: ಮುಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮುಹಮ್ಮದ್ ಶಮಿ, ರಿಷಭ್ ಪಂತ್

B: ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್

C: ರಿಂಕು ಸಿಂಗ್, ತಿಲಕ್ ವರ್ಮಾ, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್, ಮುಖೇಶ್ ಕುಮಾರ್, ಧ್ರುವ ಜುರೆಲ್, ಸರ್ಫರಾಝ್ ಖಾನ್, ರಜತ್ ಪಾಟಿದಾರ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News