ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ಹಿನ್ನಲೆ : ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‌ಗಳನ್ನು ವಜಾ ಮಾಡಿದ ಬಿಸಿಸಿಐ

Update: 2025-04-17 10:37 IST
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ಹಿನ್ನಲೆ : ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‌ಗಳನ್ನು ವಜಾ ಮಾಡಿದ ಬಿಸಿಸಿಐ

Photo | indiatoday

  • whatsapp icon

ಹೊಸದಿಲ್ಲಿ : ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರಲ್ಲಿ ಭಾರತ ತಂಡದ ಹೀನಾಯ ಸೋಲಿನ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡದ ಕೆಲ ಕೋಚ್‌ಗಳನ್ನು ತೆಗೆದುಹಾಕುವ  ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ಕೈಗೊಂಡಿದೆ.

ಎಂಟು ತಿಂಗಳ ಹಿಂದೆಯಷ್ಟೇ ನೇಮಕವಾಗಿದ್ದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಜೊತೆಗೆ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರನ್ನೂ ವಜಾ ಮಾಡಲಾಗಿದೆ.

ಟಿ.ದಿಲೀಪ್ ಅವರ ಬದಲಿಗೆ, ಸಹಾಯಕ ತರಬೇತುದಾರ ರಿಯಾನ್ ಟೆನ್ ಡೋಸ್ಚೇಟ್ ಅವರಿಗೆ ಫೀಲ್ಡಿಂಗ್ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ನೀಡಲಾಗಿದೆ. ಸೋಹಂ ದೇಸಾಯಿ ಬದಲಿಗೆ ದಕ್ಷಿಣ ಆಫ್ರಿಕಾದ ತರಬೇತುದಾರ ಆಡ್ರಿಯನ್ ಲೆ ರೌಕ್ಸ್ ಗೆ ಫಿಟ್ನೆಸ್ ಜವಾಬ್ಧಾರಿಯನ್ನು ನೀಡಲಾಗಿದೆ.

ಜೂನ್ 20ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಹೊಸ ಸಿಬ್ಬಂದಿಗಳು ಭಾರತೀಯ ತಂಡವನ್ನು ಸೇರುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News