ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ: ಭಾರತಕ್ಕೆ ಮತ್ತೆ ಆರಂಭಿಕ ಆಘಾತ

Update: 2024-12-16 05:00 GMT
PC: PTI

ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತೆ ಆರಂಭಿಕ ಆಘಾತಕ್ಕೆ ತುತ್ತಾಗಿದ್ದು, ಕೇವಲ 48 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಡಕ್ಜೆ ಸಿಲುಕಿದೆ.

ಇದಕ್ಕೂ ಮುನ್ನ, ಮೊದಲ ಇನಿಂಗ್ಸ್ನಲ್ಲಿ ನಿನ್ನ ಏಳು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ, ಇಂದು ಆಟ ಮುಂದುವರಿಸಿ 445 ರನ್‌ಗಳಿಗೆ ಆಲೌಟಾಯಿತು. ಭಾರತದ ಪರ ಯಶಸ್ವಿ ಬೌಲರ್ ಆಗಿ ಹೊಮ್ಮಿದ ಜಸ್‌ಪ್ರೀತ್ ಬುಮ್ರಾ, ಆರು ವಿಕೆಟ್ ಕಿತ್ತರು. ಉಳಿದಂತೆ ಮುಹಮ್ಮದ್ ಸಿರಾಜ್ ಎರಡು ವಿಕೆಟ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಆಕಾಶ್ ದೀಪ್ ತಲಾ 1 ವಿಕೆಟ್ ಪಡೆದರು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(4)ರನ್ನು ಬಹುಬೇಗ ಕಳೆದುಕೊಂಡಿತು. ನಂತರ ಬಂದ ಶುಭಮನ್ ಗಿಲ್ ( 1) ಹಾಗೂ ವಿರಾಟ್ ಕೊಹ್ಲಿ ಕೂಡಾ ಪೆವಿಲಿಯನ್ ಪೆರೇಡ್ ನಡೆಸಿದರು. ನಾಲ್ಕನೆ ವಿಕೆಟ್‌ಗೆ ಕೆ.ಎಲ್.ರಾಹುಲ್ ರೊದಿಗೆ ಜೊತೆಯಾದ ರಿಷಭ್ ಪಂತ್, ಕೊಂಚ ಕಾಲ ಪ್ರತಿರೋಧ ತೋರಿದರಾದರೂ, ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಈ ನಡುವೆ, ಆಗಾಗ ಮಳೆಯ ಕಾಟದಿಂದ ಪಂದ್ಯ ಒಂದೆರಡು ಬಾರಿ ಸ್ಥಗಿತಗೊಂಡಿತ್ತು.

ಇತ್ತೀಚಿನ ವರದಿಗಳ ಪ್ರಕಾರ, 30 ರನ್ ಗಳಿಸಿರುವ ಕೆ.ಎಲ್.ರಾಹುಲ್ ಹಾಗೂ ಇನ್ನೂ ಖಾತೆ ತೆರೆಯದ ರೋಹಿತ್ ಶರ್ಮ ಕ್ರೀಸಿನಲ್ಲಿದ್ದಾರೆ.

ಮಳೆ ಮತ್ತೊಮ್ಮೆ ಅಡ್ಡಿ ಪಡಿಸಿದ್ದರಿಂದ ಸದ್ಯ ಪಂದ್ಯ ಸ್ಥಗಿತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News