ಎಲ್ಲ ಮಾದರಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೌಲರ್ ಅಂಕಿತ್ ರಾಜ್‌ಪೂತ್

Update: 2024-12-16 15:57 GMT

 ರಾಜ್‌ಪೂತ್ | PC : ankitrajpoot.412 \ instagram.com 

ಹೊಸದಿಲ್ಲಿ: ವೇಗದ ಬೌಲರ್ ಅಂಕಿತ್ ರಾಜ್‌ಪೂತ್ ಸೋಮವಾರ ಎಲ್ಲ ಮಾದರಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

ಬೌನ್ಸ್ ಹಾಗೂ ಸ್ವಿಂಗ್ ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ 31ರ ಹರೆಯದ ರಾಜ್‌ಪೂತ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ಪರ ಆಡಿದ್ದರು.

2012-13ರ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿದ್ದ ರಾಜ್‌ಪೂತ್ 248 ವಿಕೆಟ್‌ಗಳನ್ನು ಪಡೆದು ಉತ್ತರ ಪ್ರದೇಶದ ರಣಜಿ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಐಪಿಎಲ್ ವೃತ್ತಿಜೀವನದಲ್ಲಿ 29 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದು, ಒಂದು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಐಪಿಎಲ್-2020ರಿಂದ ಟೂರ್ನಿಯಲ್ಲಿ ಭಾಗವಹಿಸಿಲ್ಲ. ಇತ್ತೀಚೆಗೆ ಐಪಿಎಲ್ ಹರಾಜಿನಲ್ಲಿ ಯಾವ ತಂಡವೂ ಅವರನ್ನು ಖರೀದಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News