ಬ್ರೆಂಡನ್ ಮೆಕಲಮ್ ವಿಶ್ವ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

Update: 2024-11-23 14:06 GMT

 ಜೈಸ್ವಾಲ್ | PC : PTI 

ಪರ್ತ್: ಭಾರತದ ಯುವ ಬ್ಯಾಟಿಂಗ್ ಸ್ಟಾರ್ ಯಶಸ್ವಿ ಜೈಸ್ವಾಲ್ ತನ್ನ ಹೆಸರಿಗೆ ತಕ್ಕಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸಿಕ್ಸರ್ಗಳನ್ನು ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

22ರ ಹರೆಯದ ಜೈಸ್ವಾಲ್ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ನ 2ನೇ ದಿನದಾಟವಾದ ಶನಿವಾರ ಈ ಮೈಲಿಗಲ್ಲು ತಲುಪಿದ್ದಾರೆ.

ಜೈಸ್ವಾಲ್ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಎರಡನೇ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಾಯದಿಂದ ಔಟಾಗದೆ 90 ರನ್ ಗಳಿಸಿದ್ದಾರೆ. ತನ್ನ ಇನಿಂಗ್ಸ್ನಲ್ಲಿ ಎರಡು ಸಿಕ್ಸರ್ಗಳನ್ನು ಸಿಡಿಸಿರುವ ಜೈಸ್ವಾಲ್ ಅವರು 2024ರಲ್ಲಿ ಆಡಿರುವ 12 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 34ನೇ ಸಿಕ್ಸರ್ ಸಿಡಿಸಿದ್ದಾರೆ.

ನಾಥನ್ ಲಿಯೊನ್ ಬೌಲಿಂಗ್ನಲ್ಲಿ ಮುನ್ನುಗ್ಗಿ ಆಡಿದ ಜೈಸ್ವಾಲ್ ಲಾಂಗ್ಆನ್ನತ್ತ ಭರ್ಜರಿ ಸಿಕ್ಸರ್ ಸಿಡಿಸಿದರು. ಈ ಮೂಲಕ ಈ ವರ್ಷ 34ನೇ ಸಿಕ್ಸರ್ ಸಿಡಿಸಿದರು. ಕ್ಯಾಲೆಂಡರ್ ವರ್ಷದಲ್ಲಿ 33 ಸಿಕ್ಸರ್ಗಳನ್ನು ಸಿಡಿಸಿದ್ದ ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರ ದಾಖಲೆಯನ್ನು ಮುರಿದರು.

2023ರಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದ್ದ ಜೈಸ್ವಾಲ್ 2024ರಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ. ವಿಶಾಖಪಟ್ಟಣ ಹಾಗೂ ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧ ತಲಾ ಒಂದು ದ್ವಿಶತಕ ಸಿಡಿಸಿದ್ದಾರೆ.

ಹೆಚ್ಚುವರಿಯಾಗಿ 52.47ರ ಸರಾಸರಿಯಲ್ಲಿ 73.10ರ ಸ್ಟ್ರೈಕ್ರೇಟ್ನಲ್ಲಿ 8 ಅರ್ಧಶತಗಳನ್ನು ಸಿಡಿಸಿದ್ದಾರೆ.

ಜೈಸ್ವಾಲ್ ಕಳೆದ ತಿಂಗಳು ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆಗೆ ಕ್ಯಾಲೆಂಡರ್ ವರ್ಷದಲ್ಲಿ 1,000 ಟೆಸ್ಟ್ ರನ್ ಗಳಿಸಿದ ಭಾರತದ ಯುವ ಆಟಗಾರ ಎನಿಸಿಕೊಂಡಿದ್ದರು.

*ಟೆಸ್ಟ್ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸಿಕ್ಸರ್ ಸರದಾರರು

34: ಯಶಸ್ವಿ ಜೈಸ್ವಾಲ್(2024)

33: ಬ್ರೆಂಡನ್ ಮೆಕಲಮ್(2014)

26: ಬೆನ್ ಸ್ಟೋಕ್ಸ್(2022)

22: ಆಡಮ್ ಗಿಲ್ಕ್ರಿಸ್ಟ್(2005)

22: ವೀರೇಂದ್ರ ಸೆಹ್ವಾಗ್(2008)

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News