ಈ ವರ್ಷದ ಐಪಿಎಲ್‌ನ ಕೆಲವು ಪಂದ್ಯಗಳಿಗೆ ಬುಮ್ರಾ ಅಲಭ್ಯ: ಜಯವರ್ಧನೆ

Update: 2025-03-19 22:16 IST
ಈ ವರ್ಷದ ಐಪಿಎಲ್‌ನ ಕೆಲವು ಪಂದ್ಯಗಳಿಗೆ ಬುಮ್ರಾ ಅಲಭ್ಯ: ಜಯವರ್ಧನೆ

Photo: X/ @mipaltan

  • whatsapp icon

ಮುಂಬೈ: ಕೋಲ್ಕತಾದಲ್ಲಿ ಶನಿವಾರ(ಮಾ.22)ದಿಂದ ಆರಂಭವಾಗಲಿರುವ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕೆಲವು ಪಂದ್ಯಗಳಿಂದ ಜಸ್‌ಪ್ರಿತ್ ಬುಮ್ರಾ ವಂಚಿತರಾಗಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲ ಜಯವರ್ಧನೆ ಹೇಳಿದ್ದಾರೆ.

ಭಾರತದ ಪ್ರಮುಖ ವೇಗದ ಬೌಲರ್ ಬುಮ್ರಾ ಸದ್ಯ ಬೆಂಗಳೂರಿನಲ್ಲಿರುವ ಬಿಸಿಸಿಐ ಎಕ್ಸಲೆನ್ಸ್ ಸೆಂಟರ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಬುಮ್ರಾ ಆದಷ್ಟು ಬೇಗನೆ ಮುಂಬೈ ತಂಡವನ್ನು ಸೇರಲಿದ್ದಾರೆ ಎಂದು ಜಯವರ್ಧನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಐದನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಗಾಯಗೊಂಡು ಸ್ಕ್ಯಾನಿಂಗ್‌ಗೆ ಒಳಗಾಗಿದ್ದ ಬುಮ್ರಾ ಈ ವರ್ಷದ ಜನವರಿಯಿಂದ ಕ್ರಿಕೆಟ್ ಅಂಗಣದಿಂದ ದೂರ ಉಳಿದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಿಂದಲೂ ವಂಚಿತರಾಗಿದ್ದ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಆತಂಕ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಬುಮ್ರಾಗೆ ಹೆಚ್ಚಿನ ಕೆಲಸದ ಭಾರ ಹೊರಿಸದಂತೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಕೋಚ್ ಶೇನ್ ಬಾಂಡ್ ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News