ಫೆಡರೇಶನ್ ಕಪ್: 200 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ಅನಿಮೇಶ್ ಕುಜುರ್
Update: 2025-04-24 21:49 IST

ಅನಿಮೇಶ್ ಕುಜುರ್ | PC : X \ @Anuj_utkala
ಕೊಚ್ಚಿ: ನ್ಯಾಶನಲ್ ಫೆಡರೇಶನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಗುರುವಾರ ಅನಿಮೇಶ್ ಕುಜುರ್ ಅವರು ಪುರುಷರ 200 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಅನಿಮೇಶ್ 20.40 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಅಮ್ಲಾನ್ ಬೊರ್ಗೊಹೈನ್(20.52 ಸೆಕೆಂಡ್)ಅವರ ಈ ಹಿಂದಿನ ದಾಖಲೆಯನ್ನು ಮುರಿದರು.
20.40 ಸೆಕೆಂಡ್ ನಲ್ಲಿ ಗುರಿ ತಲುಪಿರುವ ಕುಜುರ್ ಈ ಋತುವಿನಲ್ಲಿ ವಿಶ್ವದ 35ನೇ ಶ್ರೇಷ್ಠ ಸಾಧನೆ ಮಾಡಿದರು.