ಐಒಸಿ ಅಧ್ಯಕ್ಷರನ್ನು ಭೇಟಿಯಾದ ಐಸಿಸಿ ಮುಖ್ಯಸ್ಥ ಜಯ್ ಶಾ

Update: 2025-01-21 21:11 IST
ಐಒಸಿ ಅಧ್ಯಕ್ಷರನ್ನು ಭೇಟಿಯಾದ ಐಸಿಸಿ ಮುಖ್ಯಸ್ಥ ಜಯ್ ಶಾ

ಜಯ್ ಶಾ,  ಥಾಮಸ್ ಬಾಕ್‌ | Photo Credit: ICC 

  • whatsapp icon

ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಮುಖ್ಯಸ್ಥ ಜಯ್ ಶಾ ಅವರು ಜನವರಿ 30ರಂದು ನಡೆಯಲಿರುವ ಐಒಸಿ ಅಧಿವೇಶನಕ್ಕಿಂತ ಮೊದಲು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(ಐಒಸಿ)ಅಧ್ಯಕ್ಷ ಥಾಮಸ್ ಬಾಕ್‌ರನ್ನು ಮಂಗಳವಾರ ಭೇಟಿಯಾದರು.

ಕಳೆದ ತಿಂಗಳು ಬ್ರಿಸ್ಬೇನ್‌ಗೆ ಭೇಟಿ ನೀಡಿದ್ದ ಶಾ ಅವರು 2032ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಒತ್ತಾಯಿಸಿದ್ದರು. ಆಗ 2032ರ ಬ್ರಿಸ್ಬೇನ್ ಒಲಿಂಪಿಕ್ಸ್ ಸಂಘಟನ ಸಮಿತಿಯ ಅಧ್ಯಕ್ಷ ಸಿಂಡಿ ಹೂಕ್, ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ, ನಿಕ್ ಹಾಕ್ಲೆ ಅವರೊಂದಿಗೆ ಚರ್ಚಿಸಿದ್ದರು.

ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯ ವಿಚಾರದಲ್ಲಿ ಶಾ ಪ್ರಮುಖ ಪಾತ್ರವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News