ವಿಶ್ವಕಪ್: ಭಾರತದ ಅಗ್ರಸ್ಥಾನ ಸುಭದ್ರ- ನಾಲ್ಕನೇ ಸ್ಥಾನಕ್ಕೆ ಪೈಪೋಟಿ

Update: 2023-11-06 03:57 GMT

Photo: twitter.com/nitin_gadkari

ಕೊಲ್ಕತ್ತಾ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಬಲ ಎದುರಾಳಿ ಎನಿಸಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಸತತ ಎಂಟು ಜಯದೊಂದಿಗೆ 16 ಅಂಕ ಪಡೆದ ಭಾರತದ ಮಟ್ಟವನ್ನು ಲೀಗ್ ಹಂತದಲ್ಲಿ ಯಾವ ತಂಡವೂ ತಲುಪಲು ಸಾಧ್ಯವಿಲ್ಲ.

ಭಾರತ ತಂಡ ವಿರಾಟ್ ಕೊಹ್ಲಿಯವರ ದಾಖಲೆ ಶತಕದ ಮೂಲಕ 243 ರನ್‍ಗಳ ಭರ್ಜರಿ ಜಯ ಸಾಧಿಸಿದ್ದು, ನಿವ್ವಳ ರನ್‍ರೇಟ್‍ನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಎಂಟು ಪಂದ್ಯಗಳಿಂದ 12 ಅಂಕ ಗಳಿಸಿದ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದರೆ, ಪಂದ್ಯಾವಳಿಯಲ್ಲಿ ಇನ್ನೂ ಎರಡು ಪಂದ್ಯ ಆಡಬೇಕಿರುವ ಆಸ್ಟ್ರೇಲಿಯಾ ಎರಡೂ ಪಂದ್ಯಗಳನ್ನು ಗೆದ್ದರೂ 14 ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಆಸ್ಟ್ರೇಲಿಯಾ ಗರಿಷ್ಠ ಅಂದರೆ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಎರಡು ಮತ್ತು ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಹಂಚಿಕೊಳ್ಳಲಿದ್ದು, ನಾಲ್ಕನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ತೀವ್ರ ಪೈಪೋಟಿ ಇದೆ. ಸದ್ಯಕ್ಕೆ ಈ ತಂಡಗಳು ಸಮಾನ ಅಂಕಗಳನ್ನು ಪಡೆದಿದ್ದರೂ, ನಿವ್ವಳ ರನ್‍ರೇಟ್ ಆಧಾರದಲ್ಲಿ ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿವೆ. ಎರಡು ತಂಡಗಳು ತಲಾ ಒಂದು ಪಂದ್ಯಗಳನ್ನು ಆಡಬೇಕಿದ್ದು, ಅಫ್ಘಾನಿಸ್ತಾನಕ್ಕೆ ಎರಡು ಅವಕಾಶಗಳಿವೆ. ಅಗಾಧ ಅಂತರದಿಂದ ಗೆದ್ದ ತಂಡದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಸದ್ಯಕೆ ನ್ಯೂಝಿಲೆಂಡ್ +0.398, ಪಾಕಿಸ್ತಾನ +0.036 ಹಾಗೂ ಅಪ್ಘಾನಿಸ್ತಾನ -0.330 ನಿವ್ವಳ ರನ್‍ರೇಟ್ ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News