ಐಸಿಸಿ ಏಕದಿನ ವಿಶ್ವಕಪ್: ರಜನಿಕಾಂತ್ ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ

Update: 2023-09-19 22:27 IST
ಐಸಿಸಿ ಏಕದಿನ ವಿಶ್ವಕಪ್: ರಜನಿಕಾಂತ್ ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ

Photo : twitter/BCCI

  • whatsapp icon

ಹೊಸದಿಲ್ಲಿ : ಅಹಮದಾಬಾದ್ ನಲ್ಲಿ ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಗೆ ಮುಂಚಿತವಾಗಿ ಬಿಸಿಸಿಐ ಮಂಗಳವಾರದಂದು ಸೂಪರ್ ಸ್ಟಾರ್ ರಜನಿಕಾಂತ್ ಗೆ ಗೋಲ್ಡನ್ ಟಿಕೆಟ್ ನೀಡಿದೆ.

ಗೌರವಾನ್ವಿತ ಅತಿಥಿಯಾಗಿ ರಜನಿಕಾಂತ್ ಅವರು ವಿಶ್ವಕಪ್ ಗೆ ಆಗಮಿಸಲಿದ್ದಾರೆ ಎಂದು ಕಾರ್ಯದರ್ಶಿ ಜಯ್ ಶಾ ಅವರು ರಜನಿಕಾಂತ್ ಗೆ ಟಿಕೆಟನ್ನು ಹಸ್ತಾಂತರಿಸುವ ಫೋಟೊದೊಂದಿಗೆ ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಮಾಡಿದೆ. ಈ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯು ಅ.5ರಂದು 2019ರ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ಮುಖಾಮುಖಿಯೊಂದಿಗೆ ಆರಂಭವಾಗಲಿದೆ.

ಗೋಲ್ಡನ್ ಟಿಕೆಟ್ ಗಳು ಬಿಸಿಸಿಐ ತಾನು ಆಯೋಜಿಸುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಬಳಸುತ್ತಿರುವ ಪ್ರಚಾರ ತಂತ್ರವಾಗಿದೆ. ಜಯ್ ಶಾ ಈ ಮೊದಲು ಅಮಿತಾಭ್ ಬಚ್ಚನ್ ಹಾಗೂ ಸಚಿನ್ ತೆಂಡುಲ್ಕರ್ ಗೆ ವಿಶ್ವಕಪ್ ನ ಗೋಲ್ಡನ್ ಟಿಕೆಟ್ ಗಳನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News