ಐಸಿಸಿ ಟಿ20 ರ‍್ಯಾಂಕಿಂಗ್ ; ದ್ವಿತೀಯ ಸ್ಥಾನ ಕಾಯ್ದುಕೊಂಡ ಅಭಿಷೇಕ್, ವರುಣ್ ಚಕ್ರವರ್ತಿ

Update: 2025-03-19 22:29 IST
ಐಸಿಸಿ ಟಿ20 ರ‍್ಯಾಂಕಿಂಗ್ ; ದ್ವಿತೀಯ ಸ್ಥಾನ ಕಾಯ್ದುಕೊಂಡ ಅಭಿಷೇಕ್, ವರುಣ್ ಚಕ್ರವರ್ತಿ

ವರುಣ್‌ ಚಕ್ರವರ್ತಿ, ಅಭಿಶೇಕ್‌ ಶರ್ಮಾ | Photo : ANI

  • whatsapp icon

ದುಬೈ: ಭಾರತದ ಆಕ್ರಮಣಕಾರಿ ಶೈಲಿಯ ಆಟಗಾರ ಅಭಿಷೇಕ್ ಶರ್ಮಾ ಹಾಗೂ ‘ರಹಸ್ಯ’ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ 252 ಪಾಯಿಂಟ್ಸ್‌ನೊಂದಿಗೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ದೀಪೇಂದ್ರ ಸಿಂಗ್(233)ಹಾಗೂ ಆಸ್ಟ್ರೇಲಿಯದ ಮಾರ್ಕಸ್ ಸ್ಟೋಯಿನಿಸ್(210)ಗಿಂತ ಮುಂದಿದ್ದಾರೆ.

ಹೊಡಿ-ಬಡಿ ದಾಂಡಿಗ ತಿಲಕ್ ವರ್ಮಾ ಹಾಗೂ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬುಧವಾರ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.

856 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್(815 ಅಂಕ)ಮೂರನೇ ಸ್ಥಾನದಲ್ಲಿದ್ದಾರೆ.

ಅಭಿಷೇಕ್ 829 ಅಂಕ, ವರ್ಮಾ 804 ಹಾಗೂ ಸೂರ್ಯಕುಮಾರ್ 739 ಅಂಕ ಗಳಿಸಿದ್ದಾರೆ.

ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ವೆಸ್ಟ್‌ಇಂಡೀಸ್‌ನ ಅಕೀಲ್ ಹುಸೇನ್(707 ಅಂಕ)ಅಗ್ರ ಸ್ಥಾನದಲ್ಲಿದ್ದು, ವರುಣ್‌ಗಿಂತ ಕೇವಲ ಒಂದು ಅಂಕದಿಂದ ಮುಂದಿದ್ದಾರೆ. ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್(705), ಶ್ರೀಲಂಕಾದ ವನಿಂದು ಹಸರಂಗ(700) ಹಾಗೂ ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆಡಮ್ ಝಂಪಾ(694) ಆ ನಂತರದ ಸ್ಥಾನದಲ್ಲಿದ್ದಾರೆ.

ಭಾರತದ ರವಿ ಬಿಷ್ಣೋಯಿ 674 ಪಾಯಿಂಟ್ಸ್‌ನೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್(653 ಅಂಕ)9ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಪಾಕಿಸ್ತಾನದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ತನ್ನ ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿರುವ ನ್ಯೂಝಿಲ್ಯಾಂಡ್‌ನ ಆರಂಭಿಕ ಜೋಡಿ ಟಿಮ್ ಸೆಫರ್ಟ್‌ಹಾಗೂ ಫಿನ್ ಅಲ್ಲೆನ್, ಹೊಸ ಚೆಂಡಿನ ಬೌಲರ್ ಜೇಕಬ್ ಡಫಿ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಸಾಧಿಸಿದ್ದಾರೆ.

ಸೆಫರ್ಟ್ 20 ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ಪಡೆದರೆ, ಅಲ್ಲೆನ್ 8 ಸ್ಥಾನ ಮೇಲಕ್ಕೇರಿ 18ನೇ ಸ್ಥಾನದಲ್ಲಿದ್ದಾರೆ. ಎರಡು ಪಂದ್ಯಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದಿದ್ದ ಡಫಿ 23 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 12ನೇ ಸ್ಥಾನ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News