ಫುಟ್ಬಾಲ್: ಮಾಲ್ಡೀವ್ಸ್‌ಗೆ ಸೋಲುಣಿಸಿದ ಭಾರತ; ಪುನರಾಗಮನ ಪಂದ್ಯದಲ್ಲಿ ಮಿಂಚಿದ ಸುನೀಲ್ ಚೆಟ್ರಿ

Update: 2025-03-19 23:57 IST
ಫುಟ್ಬಾಲ್: ಮಾಲ್ಡೀವ್ಸ್‌ಗೆ ಸೋಲುಣಿಸಿದ ಭಾರತ; ಪುನರಾಗಮನ ಪಂದ್ಯದಲ್ಲಿ ಮಿಂಚಿದ ಸುನೀಲ್ ಚೆಟ್ರಿ

PC | Indian Football/ Twitter

  • whatsapp icon

ಹೊಸದಿಲ್ಲಿ: ಕಳೆದ ವರ್ಷ ಮೇನಲ್ಲಿ ನಿವೃತ್ತಿಯಾದ ನಂತರ ಸುನೀಲ್ ಚೆಟ್ರಿ ಅವರು ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಬುಧವಾರ ಮಾಲ್ಡೀವ್ಸ್ ತಂಡದ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವು 3-0 ಅಂತರದಿಂದ ಜಯಶಾಲಿಯಾಗಿದೆ.

ಒಂದು ಗೋಲು ಗಳಿಸಿದ ಚೆಟ್ರಿ ಅವರು ಭಾರತವು 12 ಪಂದ್ಯಗಳ ಸೋಲಿನಿಂದ ಹೊರಬರಲು ನೆರವಾದರು.

ರಾಹುಲ್ ಭಿಕೆ 35ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಲಿಸ್ಟನ್ ಕೊಲಾಕೊ 66ನೇ ನಿಮಿಷದಲ್ಲಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ರಾಷ್ಟ್ರೀಯ ತಂಡಕ್ಕೆ ವಾಪಸಾಗಿರುವ 40ರ ಹರೆಯದ ಚೆಟ್ರಿ 77ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರೊಂದಿಗೆ ತನ್ನ 95ನೇ ಅಂತರಾಷ್ಟ್ರೀಯ ಗೋಲು ದಾಖಲಿಸಿದರು. ಚೆಟ್ರಿ 47ನೇ ನಿಮಿಷದಲ್ಲಿ ಕೂದಲೆಳೆ ಅಂತರದಿಂದ ಗೋಲು ಗಳಿಸುವುದರಿಂದ ವಂಚಿತರಾದರು.

ಭಾರತವು 16 ತಿಂಗಳ ನಂತರ ಮೊದಲ ಗೆಲುವು ದಾಖಲಿಸಿದೆ. 2023ರ ನ.16ರಂದು ಕುವೈಟ್‌ಸಿಟಿಯಲ್ಲಿ ಕುವೈಟ್ ವಿರುದ್ಧ 1-0 ಅಂತರದಿಂದ ಕೊನೆಯ ಬಾರಿ ಜಯ ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News