3ನೇ ಟಿ20 ಪಂದ್ಯ | ಸ್ಯಾಮ್ಸನ್ ಶತಕ, ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ

Update: 2024-10-12 17:51 GMT

Photo : x/@BCCI

ಹೈದರಾಬಾದ್ : ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಶತಕ(111 ರನ್, 47 ಎಸೆತ, 11 ಬೌಂಡರಿ, 8 ಸಿಕ್ಸರ್), ನಾಯಕ ಸೂರ್ಯಕುಮಾರ್ ಯಾದವ್ ಅರ್ಧಶತಕ(75 ರನ್, 35 ಎಸೆತ, 8 ಬೌಂಡರಿ, 5 ಸಿಕ್ಸರ್) ಸ್ಪಿನ್ನರ್ ರವಿ ಬಿಷ್ಣೋಯ್(3-30)ಅಮೋಘ ಬೌಲಿಂಗ್ ನೆರವಿನಿಂದ ಆಲ್‌ರೌಂಡ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾವು ಬಾಂಗ್ಲಾದೇಶ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನು 133 ರನ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ಟೆಸ್ಟ್ ಸರಣಿಯಲ್ಲೂ ಸೋತಿದ್ದ ಬಾಂಗ್ಲಾದೇಶವು ಭಾರತ ಪ್ರವಾಸವನ್ನು ಕೊನೆಗೊಳಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 298 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು ತೌಹಿದ್ ಹ್ರಿದಾಯ್(ಔಟಾಗದೆ 63, 42 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ಲಿಟನ್ ದಾಸ್(42 ರನ್, 25 ಎಸೆತ, 8 ಬೌಂಡರಿ)ಹೋರಾಟದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಆರಂಭಿಕ ಬ್ಯಾಟರ್ ಪರ್ವೇಝ್(0)ವಿಕೆಟನ್ನು ಶೂನ್ಯಕ್ಕೆ ಕಳೆದುಕೊಂಡ ಬಾಂಗ್ಲಾದೇಶ ಕಳಪೆ ಆರಂಭ ಪಡೆಯಿತು. ನಾಯಕ ನಜ್ಮುಲ್ ಹುಸೈನ್(14 ರನ್)ಹಾಗೂ ಹಿರಿಯ ಬ್ಯಾಟರ್ ಮಹ್ಮೂದುಲ್ಲಾ(8ರನ್)ಬೇಗನೆ ಔಟಾದರು.

ರವಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮಯಾಂಕ್ ಯಾದವ್(2-32) ಎರಡು ವಿಕೆಟ್ ಪಡೆದರು. ಸುಂದರ್(1-4) ಹಾಗೂ ನಿತಿಶ್ ಕುಮಾರ್(1-31) ತಲಾ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News