ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ಸ್‌ಗೆ ಭಾರತೀಯ ತಂಡ ಪ್ರಕಟ; ನೀರಜ್ ಚೋಪ್ರಾ ಭಾಗವಹಿಸುವುದಿಲ್ಲ

ನೀರಜ್ ಚೋಪ್ರಾ | PTI
ಹೊಸದಿಲ್ಲಿ: ದಕ್ಷಿಣ ಕೊರಿಯದ ಗುಮಿಯಲ್ಲಿ ನಡೆಯಲಿರುವ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ, ಜಾವೆಲಿನ್ ಎಸೆತದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಪಾಲ್ಗೊಳ್ಳುವುದಿಲ್ಲ.
ಕ್ರೀಡಾಕೂಟವು ಮೇ 27ರಿಂದ 31ರವರೆಗೆ ನಡೆಯಲಿದೆ.
ಕೊಚ್ಚಿಯಲ್ಲಿ ನಡೆದ ಫೆಡರೇಶನ್ ಕಪ್ ಕ್ರೀಡಾಕೂಟದ ಮುಕ್ತಾಯದ ಬಳಿಕ ಶುಕ್ರವಾರ ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ತಂಡವನ್ನು ಘೋಷಿಸಿತು. ತಂಡದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್‌ರ ಹೆಸರಿಲ್ಲ. ಅವರು ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ.
►ತಂಡ
►ಪುರುಷರು
200 ಮೀ ಒಟ: ಅನಿಮೇಶ್ ಕುಜೂರ್
800 ಮೀ ಓಟ: ಅನು ಕುಮಾರ್, ಕೃಶನ್ ಕುಮಾರ್
1500 ಮೀ ಓಟ: ಯೂನುಸ್ ಶಾ
3000 ಮೀ ಸ್ಟೀಪಲ್‌ಚೇಸ್: ಅವಿನಾಶ್ ಸಾಬ್ಳೆ
5000 ಮೀ ಓಟ: ಗುಲ್ವೀರ್ ಸಿಂಗ್, ಅಭಿಶೇಕ್ ಪಾಲ್
10,000 ಮೀ ಓಟ: ಗುಲ್ವೀರ್ ಸಿಂಗ್, ಸಾವನ್ ಬರ್ವಾಲ್
ಟ್ರಿಪಲ್ ಜಂಪ್: ಪ್ರವೀಣ್ ಚಿತ್ರಾವೆಲ್, ಅಬ್ದುಲ್ಲಾ ಅಬೂಬಕರ್
ಹೈಜಂಪ್: ಸರ್ವೇಶ್ ಕುಶಾರೆ
ಜಾವೆಲಿನ್ ತ್ರೋ: ಸಚಿನ್ ಯಾದವ್, ಯಶ್ ವೀರ್ ಸಿಂಗ್
ಶಾಟ್‌ಪುಟ್: ಸಮರ್‌ದೀಪ್ ಸಿಂಗ್
ಡೆಕಾತ್ಲನ್: ತೇಜಸ್ವಿನ್ ಶಂಕರ್
20 ಕಿ.ಮೀ. ವೇಗದ ನಡಿಗೆ: ಸರ್ವಿನ್ ಸೆಬಾಸ್ಟಿಯನ್, ಅಮಿತ್
4x100 ಮೀ ರಿಲೇ: ಪ್ರಣವ್ ಪ್ರಮೋದ್, ಅನಿಮೇಶ್ ಕುಜೂರ್, ಮಣಿಕಂಠ ಹೋಬ್ಳಿದಾರ್, ಆಮ್ಲನ್ ಬೊರ್ಗೊಹೈನ್, ತಮಿಳರಸು, ರಾಗುಲ್ ಕುಮಾರ್, ಗುರಿಂದರ್ವಿರ್ ಸಿಂಗ್
4x400 ಮೀ ರಿಲೇ: ವಿಶಾಲ್ ಟಿ.ಕೆ., ಜಯ ಕುಮಾರ್, ಮನು ಟಿ.ಎಸ್. ಧರಮ್‌ವೀರ್ ಚೌಧರಿ, ರಿನ್ಸ್ ಜೋಸೆಫ್, ತುಷಾರ್ ಕಾಂತಿ, ಸಂತೋಷ್ ಕುಮಾರ್, ಮೋಹಿತ್ ಕುಮಾರ್
►ಮಹಿಳೆಯರು
200 ಮೀ ಓಟ: ನಿತ್ಯಾ ಗಂದೆ
400 ಮೀ ಓಟ: ರೂಪಾಲ್ ಚೌಧರಿ, ವಿತ್ಯಾ ರಾಮ್‌ರಾಜ್
800 ಮೀ ಓಟ: ಟ್ವಿಂಕಲ್ ಚೌಧರಿ, ಪೂಜಾ
1,500 ಮೀ ಓಟ: ಲಿಲಿ ದಾಸ್, ಪೂಜಾ
3000 ಮೀ ಸ್ಟೀಪಲ್‌ಚೇಸ್: ಪಾರುಲ್ ಚೌಧರಿ, ಅಂಕಿತಾ
5,000 ಮೀ ಓಟ: ಸಂಜೀವನಿ ಬಾಬುರಾವ್, ಪಾರುಲ್ ಚೌಧರಿ
10,000 ಮೀ ಓಟ: ಸಂಜೀವನಿ ಬಾಬುರಾವ್, ಸೀಮಾ
100 ಮೀ ಹರ್ಡಲ್ಸ್: ಜ್ಯೋತಿ ಯರ್ರಾಜಿ
400 ಮೀ ಹರ್ಡಲ್ಸ್: ವಿತ್ಯಾ ರಾಮ್‌ರಾಜ್, ಅನು ಆರ್.
ಲಾಂಗ್ ಜಂಪ್: ಶೈಲಿ ಸಿಂಗ್, ಆ್ಯನ್ಸಿ ಸೋಜನ್
ಹೆಪ್ಟಾತ್ಲಾನ್: ನಂದಿನಿ ಅಗಸರ
4x100 ಮೀ ರಿಲೇ: ನಿತ್ಯಾ ಗಂದೆ, ಅಭಿನಯ ರಾಜರಾಜನ್, ಸ್ನೇಹಾ ಎಸ್., ಸ್ರಬನಿ ನಂದಾ, ದಾನೇಶ್ವರಿ, ವಿ. ಸುದೀಕ್ಷಾ
4x400 ಮೀ ರಿಲೇ: ರೂಪಾಲ್, ಸ್ನೇಹಾ ಕೆ, ಶುಭಾ ವೆಂಕಟೇಶನ್, ಜಿಸ್ನಾ ಮ್ಯಾಥ್ಯೂ, ಕುಂಜ ರಜಿತಾ, ಸಂಡ್ರಮೋಲ್ ಸಾಬು