ಲಿಸ್ಟ್ ಎ ಕ್ರಿಕೆಟ್ ದಾಖಲೆ ಮುರಿದ ಕರುಣ್ ನಾಯರ್
ಹೊಸದಿಲ್ಲಿ: ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಒಮ್ಮೆಯೂ ತನ್ನ ವಿಕೆಟನ್ನು ಒಪ್ಪಿಸದೆ ಗರಿಷ್ಠ ರನ್ ಗಳಿಸಿದ ವಿದರ್ಭ ಬ್ಯಾಟರ್ ಕರುಣ್ ನಾಯರ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ವಿರುದ್ಧ ಶತಕ ಗಳಿಸುವ ಮೂಲಕ ಕರುಣ್ ಈ ದಾಖಲೆ ಮುರಿದರು. ಬಲಗೈ ಬ್ಯಾಟರ್ ಪಂದ್ಯಾವಳಿಯಲ್ಲಿ ಮೊದಲ ಬಾರಿ 112 ರನ್ ಗಳಿಸಿ ಔಟಾದರು. ಕರುಣ್ ಅವರ ಅಜೇಯ ರನ್ ಓಟ 542ಕ್ಕೆ ಅಂತ್ಯವಾಯಿತು.
33ರ ಹರೆಯದ ಕರುಣ್ ಪಂದ್ಯಾವಳಿಯಲ್ಲಿ 4ನೇ ಹಾಗೂ ಸತತ 3ನೇ ಶತಕ ಗಳಿಸಿದರು.
ಜಮ್ಮು-ಕಾಶ್ಮೀರದ ವಿರುದ್ಧ ಔಟಾಗದೆ 112 ರನ್ ಗಳಿಸಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಕರುಣ್ ಅವರು ಛತ್ತೀಸ್‌ಗಡ ವಿರುದ್ಧ ಔಟಾಗದೆ 44 ರನ್ ಗಳಿಸಿದ್ದರು. ಸ್ಪರ್ಧಾವಳಿಯ 3ನೇ ಪಂದ್ಯದಲ್ಲಿ ಚಂಡಿಗಡ ವಿರುದ್ಧ ಔಟಾಗದೆ 163 ರನ್ ಗಳಿಸಿದರು. ಆ ನಂತರ ತಮಿಳುನಾಡು ಎದುರು ಔಟಾಗದೆ 111 ರನ್ ಗಳಿಸಿದರು.
ಉತ್ತರ ಪ್ರದೇಶ ವಿರುದ್ಧ ಶತಕ ಗಳಿಸುವ ಮೂಲಕ ಕರುಣ್ ನ್ಯೂಝಿಲ್ಯಾಂಡ್‌ನ ಬ್ಯಾಟರ್ ಜೇಮ್ಸ್ ಫ್ರಾಂಕ್ಲಿನ್(527 ರನ್)ದಾಖಲೆಯನ್ನು ಮುರಿದರು.
*ವಿಕೆಟ್ ಒಪ್ಪಿಸದೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರು
ಕರುಣ್ ನಾಯರ್-542 ರನ್
ಜೇಮ್ಸ್ ಫ್ರಾಂಕ್ಲಿನ್-527 ರನ್
ಜೋಶುವಾ ಹೀರ್ಡನ್-512 ರನ್
ಫಖರ್ ಝಮಾನ್-455 ರನ್
ತೌಫೀಕ್ ಉಮರ್-422 ರನ್