LSG ನಾಯಕತ್ವದಿಂದ ಕೆ.ಎಲ್.ರಾಹುಲ್ ಗೆ ಕೊಕ್?

Update: 2024-08-27 06:49 GMT

ಕೆ.ಎಲ್. ರಾಹುಲ್ (PTI)

ಹೊಸದಿಲ್ಲಿ: ಮುಂದಿನ 2025ರ ಐಪಿಎಲ್ ಋತುವಿಗೆ ತಾರಾ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ಲಕ್ನೊ ಸೂಪರ್ ಜೈಂಟ್ಸ್ (LSG) ತಂಡವು ಉಳಿಸಿಕೊಳ್ಳುವ ಸಾಧ್ಯತೆ ಇದೆಯಾದರೂ, ಅವರು ತಂಡದ ನಾಯಕರಾಗಿರುವುದಿಲ್ಲ ಎಂದು ವರದಿಯಾಗಿದೆ. ಒತ್ತಡದ ಕಾರಣಕ್ಕೆ ರಾಹುಲ್ ನಾಯಕತ್ವ ತೊರೆಯುತ್ತಿದ್ದು, ಬ್ಯಾಟಿಂಗ್ ನಲ್ಲಿ ಹೆಚ್ಚು ಕೊಡುಗೆ ನೀಡಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

LSG ತಂಡದ ಆಪ್ತ ಮೂಲಗಳ ಪ್ರಕಾರ, ತಂಡವು ಕೆ.ಎಲ್.ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದ್ದು, ಆದರೆ, ಅವರ ನಾಯಕತ್ವ ಪಾತ್ರದ ಬಗ್ಗೆ ಅನಿಶ್ಚಿಕತತೆ ಇದೆ ಎಂದು ಹೇಳಲಾಗಿದೆ. ಕೆ.ಎಲ್.ರಾಹುಲ್ ಬದಲಿಗೆ ತಂಡದ ನಾಯಕತ್ವಕ್ಕಾಗಿ ಕೃನಾಲ್ ಪಾಂಡ್ಯ ಹಾಗೂ ನಿಕೊಲಾಸ್ ಪೂರಣ್ ಅವರೊಂದಿಗೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.

“ಸಿಇಒ ಸಂಜೀವ್ ಗೋಯೆಂಕಾರೊಂದಿಗೆ ಸೋಮವಾರ ನಡೆದ ಸಭೆ ಅಧಿಕೃತವಾಗಿದ್ದು, ಈ ಸಭೆಯಲ್ಲಿ ನಾಯಕತ್ವ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವ ವಿಷಯದ ಕುರಿತು ಚರ್ಚಿಸಲಾಯಿತು. ಆದರೆ, ಕೆ.ಎಲ್.ರಾಹುಲ್ ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ನಿರ್ಧರಿಸಿರುವುದರಿಂದ, ಅವರು ಮುಂದಿನ ಐಪಿಎಲ್ ಋತುವಿನಲ್ಲಿ ತಂಡದ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಕಡಿಮೆ. ರಾಹುಲ್ ಬ್ಯಾಟಿಂಗ್ ಬಗ್ಗೆ ಗೋಯೆಂಕಾ ಅವರಿಗೆ ಸಂಪೂರ್ಣ ವಿಶ್ವಾಸವಿದ್ದರೂ, ಅವರು ತಂಡದ ನಾಯಕರಾಗಿ ಮುಂದುವರಿಯುವುದಿಲ್ಲ” ಎಂದು LSG ತಂಡಕ್ಕೆ ನಿಕಟವಾಗಿರುವ ಮೂಲಗಳು ತಿಳಿಸಿವೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News