ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕೆ.ಎಲ್.ರಾಹುಲ್

Update: 2024-03-30 17:35 GMT

ಕೆ.ಎಲ್.ರಾಹುಲ್ | Photo: X \ @cool_rahulfan

ಲಕ್ನೊ: ಲಕ್ನೊ ತಂಡದ ಖಾಯಂ ನಾಯಕ ಕೆ.ಎಲ್.ರಾಹುಲ್ ಬದಲಿಗೆ ವಿಕೆಟ್‌ ಕೀಪರ್-ಬ್ಯಾಟರ್ ನಿಕೊಲಸ್ ಪೂರನ್ ಶನಿವಾರ ಪಂಜಾಬ್ ವಿರುದ್ಧ ಐಪಿಎಲ್ ಪಂದ್ಯಕ್ಕಾಗಿ ಟಾಸ್ ಚಿಮ್ಮಿಸಲು ಮೈದಾನಕ್ಕೆ ಬಂದಾಗ ಅಭಿಮಾನಿಗಳು ಅಚ್ಚರಿಪಟ್ಟರು.

ಟಾಸ್ ಜಯಿಸಿದ ಪೂರನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಪಂಜಾಬ್ ವಿರುದ್ಧ ರಾಹುಲ್ ತಂಡವನ್ನು ನಾಯಕನಾಗಿ ಮುನ್ನಡೆಸದೆ ಇರುವ ಕಾರಣವನ್ನು ಪೂರನ್ ವಿವರಿಸಿದರು.

ರಾಹುಲ್ ಅವರು ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ. ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ದೀರ್ಘ ಟೂರ್ನಿಯಲ್ಲಿ ನಾವು ಅವರಿಗೆ ವಿಶ್ರಾಂತಿ ನೀಡಲು ಎದುರು ನೋಡುತ್ತಿದ್ದೇವೆ. ಪ್ರತಿಯೊಬ್ಬರು ತಮಗೆ ಲಭಿಸಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಪೂರನ್ ಟಾಸ್ ವೇಳೆ ಹೇಳಿದರು.

ಲಕ್ನೊ ತಂಡವು ಇಂದು ಮಯಾಂಕ್ ಯಾದವ್ ಹಾಗೂ ಮಣಿಮಾರನ್ ಸಿದ್ದಾರ್ಥ್‌ಗೆ ಮೊದಲ ಬಾರಿ ಅವಕಾಶ ನೀಡಿದೆ. ಮತ್ತೊಂದೆಡೆ ಪಂಜಾಬ್ ತಂಡ ಯಾವುದೇ ಬದಲಾವಣೆ ಮಾಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News