ಕುತೂಹಲಕ್ಕೆ ಕಾರಣವಾದ ಕೆ.ಎಲ್.ರಾಹುಲ್ ಇನ್ಸ್ಟಾಗ್ರಾಮ್ ಪೋಸ್ಟ್; ನಿವೃತ್ತಿಯ ವದಂತಿ
ಹೊಸದಿಲ್ಲಿ: ಆಗಸ್ಟ್ 22ರಂದು ಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್ ಅವರ ಅಭಿಮಾನಗಳನ್ನು ಗೊಂದಲಕ್ಕೆ ದೂಡಿದೆ. ಶ್ರೀಲಂಕಾ ತಂಡದ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಮರಳಿದ್ದ ಕೆ.ಎಲ್.ರಾಹುಲ್, "ನಾನೊಂದು ಪ್ರಕಟಣೆ ಮಾಡಬೇಕಿದೆ. ನಿರೀಕ್ಷಿಸಿ" ಎಂದು ಆ ಪೋಸ್ಟ್ನಲ್ಲಿ ನಿಗೂಢವಾಗಿ ಹೇಳಿದ್ದರು.
ಅವರು ಆ ಪೋಸ್ಟ್ ಮಾಡುತ್ತಿದ್ದಂತೆಯೇ, ಅವರು ಕ್ರಿಕೆಟ್ನಿಂದ ನಿವೃತ್ತಿಯಾಗುವುದನ್ನು ದೃಢಪಡಿಸುವಂತಹ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ ಚಿತ್ರದಲ್ಲಿ ಹೀಗೆ ಬರೆಯಲಾಗಿದೆ: "ಸಾಕಷ್ಟು ಯೋಚನೆ ಹಾಗೂ ಪರಾಮರ್ಶೆಯ ನಂತರ, ನಾನು ವೃತ್ತಿಪರ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಕ್ರೀಡೆ ಹಲವಾರು ವರ್ಷಗಳಿಂದ ನನ್ನ ಬದುಕಿನಲ್ಲಿ ಗಮನಾರ್ಹ ಭಾಗವಾಗಿದ್ದುದರಿಂದ ಈ ನಿರ್ಧಾರ ಸುಲಭವಾಗಿರಲಿಲ್ಲ" ಎಂದು ಹೇಳಲಾಗಿದೆ.
ಈ ಸಂದೇಶದ ನೈಜತೆ ಇನ್ನೂ ದೃಢಪಟ್ಟಿಲ್ಲ. ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ನಿವೃತ್ತಿಯ ಕುರಿತು ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ.
ಆದರೆ, ಸೆಪ್ಟೆಂಬರ್ 5ರಿಂದ ಪ್ರಾರಂಭಗೊಳ್ಳಲಿರುವ ದುಲೀಪ್ ಟ್ರೋಫಿಯಲ್ಲಿ ಕೆ.ಎಲ್.ರಾಹುಲ್ ಪಾಲ್ಗೊಳ್ಳಲಿದ್ದಾರೆ. ಇದು ದೇಶೀ ಕ್ರಿಕೆಟ್ ಪ್ರಕಾರವಾಗಿದೆ.