ಕೆ.ಎಲ್. ರಾಹುಲ್ ‘ಡಿಆರ್ ಎಸ್’ ಗೆ ವ್ಯಾಪಕ ಪ್ರಶಂಸೆ; ಧೋನಿ ನೆನೆದ ಅಭಿಮಾನಿಗಳು

Update: 2023-11-03 13:06 GMT

ಕೆ.ಎಲ್. ರಾಹುಲ್ Photo: twitter/ImTanujSingh

ಮುಂಬೈ: ಇಲ್ಲಿನ ವಾಂಖೆಡೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ನಿಖರ ಡಿಆರ್ ಎಸ್ ನಿರ್ಧಾರ ತೆಗೆದುಕೊಂಡು ಎಲ್ಲರ ಗಮನ ಸೆಳೆದರು.

ರಾಹುಲ್ ಡಿಆರ್ ಎಸ್ ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಗುರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಅಲ್ಪ ರನ್ ಗೆ ಕಟ್ಟಿ ಹಾಕಿದ ಭಾರತ 302 ರನ್ ಗಳ ಬೃಹತ್ ಜಯ ಸಾಧಿಸಿತ್ತು . ಆದರೆ ಈ ಪಂದ್ಯದಲ್ಲಿ ಮುಹಮ್ಮದ್ ಶಮಿ ಎಸೆದ 12 ನೇ ಓವರ್ ನ ಮೂರನೇ ಬಾಲ್ ಒಂದು ಅಚ್ಚರಿಗೆ ಕಾರಣವಾಯಿತು.

ಶಮಿ ಎಸೆದ ವೈಡ್ ಬಾಲ್ ಗೆ ಲಂಕಾ ಬ್ಯಾಟರ್ ದುಶ್ಮಂತ ಚಮೀರ ಔಟ್ ಆದರು. ಆದರೆ ಇದು ಔಟ್ ಎಂದು ಯಾರಿಗೂ ತಿಳಿಯಲಿಲ್ಲ. ಶಮಿ ಎಸೆತವು ವೈಡ್ ಬಾಲ್ ಆಗಿ ಕೀಪರ್ ರಾಹುಲ್ ಕೈಸೇರಿತು. ಅಂಪೈರ್ ಕೂಡ ವೈಡ್ ತೀರ್ಪು ನೀಡಿದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೀಪರ್ ರಾಹುಲ್ ನಾಯಕ ರೋಹಿತ್ ಬಳಿ ಡಿಆರ್ ಎಸ್ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಗೊಂದಲದಲ್ಲಿದ್ದ ರೋಹಿತ್ ಕೊನೆಗೂ ರಾಹುಲ್‌ ಮನವಿಗೆ ಸ್ಪಂದಿಸಿ ಡಿಆರ್ ಎಸ್ ಮನವಿ ಮಾಡಿದರು.

ಬಳಿಕ ರೀಪ್ಲೆ ಪರಿಶೀಲಿಸಿದ ಥರ್ಡ್ ಅಂಪೈರ್ ಬಾಲ್ ಗ್ಲೌಸ್ ಬಡಿದು ವಿಕೆಟ್ ಕೀಪರ್ ಕೈಸೇರಿದ್ದನ್ನು ಗಮನಿಸಿ ನಂತರ ಔಟ್ ಎಂದು ಘೋಷಿಸಿದರು. ಆರಂಭದಲ್ಲಿ ತಂಡದ ಇತರೆ ಯಾವುದೇ ಆಟಗಾರರಿಗೆ ಈ ಬಗ್ಗೆ ಖಚಿತತೆ ಇರಲಿಲ್ಲ.

ರಾಹುಲ್ ಭವಿಷ್ಯದಲ್ಲಿ ಭಾತರದ ಶ್ರೇಷ್ಠ ವಿಕೆಟ್‌ ಕೀಪರ್‌ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಶ್ಲಾಘಿಸಿದ್ದಾರೆ

ಈ ಪಂದ್ಯದಲ್ಲಿ ಭಾರತೀಯ ವೇಗಿ ಮುಹಮ್ಮದ್ ಶಮಿ ಒಟ್ಟಾರೆ ಏಕದಿನ ವಿಶ್ವಕಪ್ ನಲ್ಲಿ 3 ಐದು ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News