ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ 73 ರನ್; ವಿರಾಟ್ ಕೊಹ್ಲಿಗೆ ಶ್ರೇಯಸ್ಸು ಸಲ್ಲಿಸಿದ ಕೃನಾಲ್ ಪಾಂಡ್ಯ

Update: 2025-04-28 20:57 IST
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ 73 ರನ್; ವಿರಾಟ್ ಕೊಹ್ಲಿಗೆ ಶ್ರೇಯಸ್ಸು ಸಲ್ಲಿಸಿದ ಕೃನಾಲ್ ಪಾಂಡ್ಯ

 ವಿರಾಟ್ ಕೊಹ್ಲಿ,  ಕೃನಾಲ್ ಪಾಂಡ್ಯ |  ANI 

  • whatsapp icon

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರವಿವಾರ ಅರುಣ್ ಜೇಟ್ಲಿ ಸ್ಟೇಡಿಯಮ್ ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ತನ್ನ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ನ ಶ್ರೇಯಸ್ಸನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರು ವಿರಾಟ್ ಕೊಹ್ಲಿಗೆ ಸಮರ್ಪಿಸಿದ್ದಾರೆ.

ಎಚ್ಚರಿಕೆ ಹಾಗೂ ಆಕ್ರಮಣಕಾರಿ ಮಿಶ್ರಣದೊಂದಿಗೆ 47 ಎಸೆತಗಳಲ್ಲಿ 73 ರನ್ ಗಳಿಸಿದ್ದ ಕೃನಾಲ್ ಪಾಂಡ್ಯ ಅವರು ಕಠಿಣ ಪಿಚ್ನಲ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿದ್ದ ಕೊಹ್ಲಿ ಜೊತೆಗೆ 119 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಒಂದು ಹಂತದಲ್ಲಿ 21 ಎಸೆತಗಳಲ್ಲಿ 17 ರನ್ ಗಳಿಸಿ ಪರದಾಟ ನಡೆಸಿದ್ದ ಪಾಂಡ್ಯ ಅವರು ಆನಂತರ ಅಬ್ಬರದ ಬ್ಯಾಟಿಂಗ್ ಮಾಡಿದರು. 5ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬ್ಯಾಟಿಂಗ್ ಮಾಡಿದ್ದ ಪಾಂಡ್ಯ ಅವರು ಕೊನೆಯ 26 ಎಸೆತಗಳಲ್ಲಿ 56 ರನ್ ಸಿಡಿಸಿದರು. ಪಾಂಡ್ಯ ಅವರು 2016ರ ನಂತರ ಮೊದಲ ಬಾರಿ ಅರ್ಧಶತಕ ಗಳಿಸಿದರು.

‘‘ವಿರಾಟ್ ಕೊಹ್ಲಿ ಅವರ ಶಕ್ತಿ ಎಲ್ಲರಿಗೂ ಹರಡುತ್ತದೆ. ನನಗೂ ಅವರ ಶಕ್ತಿ ಬಂತು. ಅವರು ನನಗೆ ನಿರಂತರವಾಗಿ ಉತ್ತೇಜನ ನೀಡಿದರು. ನನ್ನ ಈ ಸ್ಕೋರ್ ನ ಎಲ್ಲ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಇದು ಕೌಶಲ್ಯಕ್ಕಿಂತ ಮಿಗಿಲಾಗಿ ಮಾನಸಿಕವಾಗಿ ಸವಾಲಿನದ್ದಾಗಿತ್ತು. ನೀವು ಸಾಕಷ್ಟು ಬಲಶಾಲಿಯಾಗಿದ್ದರೆ, ಮರು ಹೋರಾಟ ನೀಡಬಹುದು’’ ಎಂದು ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದ ಪಾಂಡ್ಯ ಹೇಳಿದ್ದಾರೆ.

ಪಾಂಡ್ಯ ಔಟಾಗದೆ 73 ರನ್ ಗಳಿಸಿದ್ದಲ್ಲದೆ, 28 ರನ್ಗೆ 1 ವಿಕೆಟ್ ಪಡೆದಿದ್ದರು.

ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಆರ್ಸಿಬಿ ಐದು ದಿನಗಳ ವಿರಾಮದ ನಂತರ ಮೇ 3ರಂದು ಬೆಂಗಳೂರಿನಲ್ಲಿ ಸಿ ಎಸ್ ಕೆ ವಿರುದ್ಧ ಪಂದ್ಯವನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News