ಲಕ್ನೊ ಬ್ಯಾಟರ್ ನಿಕೊಲಸ್ ಪೂರನ್ ಗೆ ‘ಆರೆಂಜ್ ಕ್ಯಾಪ್’

ನಿಕೊಲಸ್ ಪೂರನ್ | PC : BCCI/IPL
ಹೊಸದಿಲ್ಲಿ: ಲಕ್ನೊ ಸೂಪರ್ ಜಯಂಟ್ಸ್‌ನ ‘ಬಿಗ್ ಹಿಟ್ಟರ್’ ನಿಕೊಲಸ್ ಪೂರನ್ 2025ರ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಸಿಕ್ಸರ್ ಬಾರಿಸುವ ತನ್ನ ಸಾಮರ್ಥ್ಯದ ಮೂಲಕ 5 ಪಂದ್ಯಗಳಲ್ಲಿ 288 ರನ್ ಗಳಿಸಿರುವ ಪೂರನ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಈಗಾಗಲೇ 24 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಪೂರನ್ ಹಾಗೂ ಇತರ ಸ್ಪರ್ಧಿಗಳ ನಡುವೆ ಭಾರೀ ಅಂತರವಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 87 ರನ್ ಗಳಿಸಿರುವ ಪೂರನ್ ಈ ಋತುವಿನಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ.
ಪೂರನ್ ನಂತರ ಅವರ ಸಹ ಆಟಗಾರ ಮಿಚೆಲ್ ಮಾರ್ಷ್ ಅವರಿದ್ದಾರೆ. ಮಾರ್ಷ್ 53ರ ಸರಾಸರಿಯಲ್ಲಿ ಒಟ್ಟು 265 ರನ್ ಗಳಿಸಿದ್ದಾರೆ. ಮಾರ್ಷ್ ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ಫಾರ್ಮ್ ಕಾಯ್ದುಕೊಂಡಿದ್ದಾರೆ. ನಿರ್ಣಾಯಕ ಸ್ಕೋರ್ ಮೂಲಕ ತನ್ನ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕೆಕೆಆರ್ ವಿರುದ್ದ 87 ರನ್ ಗಳಿಸಿ ತಂಡವು ಒಟ್ಟು 238 ರನ್ ಗಳಿಸಲು ನೆರವಾಗಿದ್ದರು.
ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ 5 ಪಂದ್ಯಗಳಲ್ಲಿ 199 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ 4ನೇ ಹಾಗೂ ಅಜಿಂಕ್ಯ ರಹಾನೆ 5ನೇ ಸ್ಥಾನದಲ್ಲಿದ್ದಾರೆ.
► ನೂರ್ ಅಹ್ಮದ್‌ಗೆ ‘ಪರ್ಪಲ್ ಕ್ಯಾಪ್’
ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಪಿನ್ನರ್ ನೂರ್ ಅಹ್ಮದ್ 2025ರ ‘ಪರ್ಪಲ್ ಕ್ಯಾಪ್’ ರೇಸ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಹ್ಮದ್ 5 ಪಂದ್ಯಗಳಲ್ಲಿ ಒಟ್ಟು 11 ವಿಕೆಟ್ ಗಳನ್ನು ಪಡೆದಿದ್ದಾರೆ. ಆ ನಂತರ ಚೆನ್ನೈನ ಇನ್ನೋರ್ವ ಬೌಲರ್ ಖಲೀಲ್ ಅಹ್ಮದ್ ಅವರಿದ್ದಾರೆ. ಅಹ್ಮದ್ 10 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ 10 ವಿಕೆಟ್ ಗಳನ್ನು ಪಡೆದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಮುಹಮ್ಮದ್ ಸಿರಾಜ್ ಒಟ್ಟು 9 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ.
ಆರೆಂಜ್ ಕ್ಯಾಪ್ ಲಿಸ್ಟ್
ರ‍್ಯಾಂಕ್ ಹೆಸರು ತಂಡ ರನ್ ಪಂದ್ಯ ಇನಿಂಗ್ಸ್
1 ನಿಕೊಲಸ್ ಪೂರನ್ ಲಕ್ನೊ 288 5 5
2 ಮಿಚೆಲ್ ಮಾರ್ಷ್ ಲಕ್ನೊ 265 5 5
3 ಸೂರ್ಯಕುಮಾರ್ ಮುಂಬೈ 199 5 5
4 ಸುದರ್ಶನ್ ಗುಜರಾತ್191 4 4
5 ಅಜಿಂಕ್ಯ ರಹಾನೆ ಕೆಕೆಆರ್ 184 5 5
ಪರ್ಪಲ್ ಕ್ಯಾಪ್ ಸ್ಪರ್ಧಿಗಳು
ರ‍್ಯಾಂಕ್ ಹೆಸರು ತಂಡ ವಿಕೆಟ್ ಪಂದ್ಯ
1 ನೂರ್ ಅಹ್ಮದ್ ಚೆನ್ನೈ 11 5
2 ಖಲೀಲ್ ಅಹ್ಮದ್ ಚೆನ್ನೈ 10 5
3 ಹಾರ್ದಿಕ್ ಪಾಂಡ್ಯ ಮುಂಬೈ 10 4
4 ಸಿರಾಜ್ ಗುಜರಾತ್ 9 4
5 ಮಿಚೆಲ್ ಸ್ಟಾರ್ಕ್ ಡೆಲ್ಲಿ 9 3