ಗರಿಷ್ಠ ವಿಶ್ವಕಪ್ ರನ್: ಫ್ಲೆಮಿಂಗ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್

Update: 2023-11-04 17:29 GMT

ಕೇನ್ ವಿಲಿಯಮ್ಸನ್

ಬೆಂಗಳೂರು: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಶುಕ್ರವಾರ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್‌ರನ್ನು ಹಿಂದಿಕ್ಕಿ, ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಗರಿಷ್ಠ ರನ್ ಗಳಿಸಿದ ದೇಶದ ಆಟಗಾರನಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅವರು ಈ ಸಾಧನೆಗೈಗಿದ್ದಾರೆ.

ಈ ಪಂದ್ಯದಲ್ಲಿ ವಿಲಿಯಮ್ಸನ್ 79 ಎಸೆತಗಳಲ್ಲಿ 95 ರನ್‌ಗಳನ್ನು ಗಳಿಸಿದರು.

ಅವರು 25 ಪಂದ್ಯಗಳು ಮತ್ತು 24 ಇನಿಂಗ್ಸ್‌ಗಳಲ್ಲಿ 63.76 ಸರಾಸರಿಯಲ್ಲಿ ವಿಶ್ವಕಪ್‌ಗಳಲ್ಲಿ 1,084 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಐದು ಅರ್ಧಶತಕಗಳಿವೆ. 148 ಅವರ ಗರಿಷ್ಠ ಮೊತ್ತವಾಗಿದೆ.

ಫ್ಲೆಮಿಂಗ್ 33 ಇನಿಂಗ್ಸ್‌ಗಳಲ್ಲಿ 35.33ರ ಸರಾಸರಿಯಲ್ಲಿ 1,075 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಎರಡು ಶತಕಗಳು ಮತ್ತು ಐದು ಅರ್ಧಶತಕಗಳಿವೆ. ಅವರ ಗರಿಷ್ಠ ಮೊತ್ತ ಅಜೇಯ 134.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News