ಈ ವರ್ಷದ ಐಪಿಎಲ್ನಲ್ಲಿ ಮೊದಲ ಪಂದ್ಯ ಆಡಿದ ಮಯಾಂಕ್ ಯಾದವ್

Update: 2025-04-27 23:57 IST
ಈ ವರ್ಷದ ಐಪಿಎಲ್ನಲ್ಲಿ ಮೊದಲ ಪಂದ್ಯ ಆಡಿದ ಮಯಾಂಕ್ ಯಾದವ್

Photo Credit: PTI

  • whatsapp icon

ಹೊಸದಿಲ್ಲಿ: ಬೆನ್ನುನೋವಿನಿಂದಾಗಿ ಈ ವರ್ಷದ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಆಡದ ಮಯಾಂಕ್ ಯಾದವ್ ಇಂದು ಮೊದಲ ಪಂದ್ಯ ಆಡಿದ್ದಾರೆ.

ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಬದಲಿಗೆ ಮಯಾಂಕ್ ಆಡಿದ್ದಾರೆ. ಶಾರ್ದುಲ್ ಹಿಂದಿನ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ.

ಕಳೆದ ವರ್ಷ ಸತತವಾಗಿ ಗಂಟೆಗೆ 150 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯದ ಮೂಲಕ ಮಯಾಂಕ್ ಸುದ್ದಿಯಾಗಿದ್ದರು. ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿಯುವ ಮೊದಲು 4 ಪಂದ್ಯಗಳಲ್ಲಿ ಆಡಿ 7 ವಿಕೆಟ್ಗಳನ್ನು ಪಡೆದಿದ್ದರು.

ಸತತ 4 ಪಂದ್ಯಗಳಲ್ಲಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಮುಂಬೈ ತಂಡವು ಆಡುವ 11ರ ಬಳಗದಲ್ಲಿ 2 ಬದಲಾವಣೆಗಳನ್ನು ಮಾಡಿತ್ತು. ಮಿಚೆಲ್ ಸ್ಯಾಂಟ್ನರ್ ತನ್ನ ಬೆರಳಿನ ಗಾಯಕ್ಕೆ ಒಳಗಾದ ಕಾರಣ ಕಾರ್ಬಿನ್ ಬಾಷ್ರನ್ನು ಮೊದಲ ಬಾರಿ ಐಪಿಎಲ್ನಲ್ಲಿ ಆಡಿಸಿತ್ತು. ಮುಂಬೈ ತಂಡದ ಹಿಂದಿನ ಪಂದ್ಯದಲ್ಲಿ ಕೇವಲ 1 ಓವರ್ ಬೌಲಿಂಗ್ ಮಾಡಿದ್ದ ವಿಘ್ನೇಶ್ ಪುಥೂರ್ ಬದಲಿಗೆ ಕರ್ಣ್ ಶರ್ಮಾ ಆಡಿದರು.

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News