ವಿಶ್ವಕಪ್ ವಿಜಯದ ಬಳಿಕ ‘ಅಲ್ಲಾಹ್‌ಗೆ ಕೃತಜ್ಞತೆ’ ಸಲ್ಲಿಸಿದ ಮುಹಮ್ಮದ್ ಸಿರಾಜ್ ವಿರುದ್ಧ ಬಲಪಂಥೀಯರಿಂದ ಟ್ರೋಲ್

Update: 2024-06-30 15:00 GMT

Image Credit: PTI

ಹೊಸದಿಲ್ಲಿ: ಕೋಟ್ಯಂತರ ಭಾರತೀಯ ಅಭಿಮಾನಿಗಳು 17 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ತಮ್ಮ ಎರಡನೇ ಟಿ20 ವಿಶ್ವಕಪ್ ಗೆಲುವನ್ನು ಸಂಭ್ರಮಿಸುತ್ತಿರುವಾಗ ವಿಜಯದ ಬಳಿಕ ವೇಗಿ ಮುಹಮ್ಮದ್‌ ಸಿರಾಜ್‌ ಅವರು ಬಲಪಂಥೀಯರಿಂದ ಟ್ರೋಲ್ ದಾಳಿಗೊಳಗಾಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಭಾರತದ ವಿಜಯದ ಬಳಿಕ ಆಟಗಾರರ ಧಾರ್ಮಿಕ ಅಭಿವ್ಯಕ್ತಿಗಳಿಗೆ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ಎತ್ತಿ ತೋರಿಸಿರುವ ಎಕ್ಸ್‌ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶ್ವಕಪ್‌ ಗೆದ್ದ ಬಳಿಕ ಸಿರಾಜ್‌ ಎಕ್ಸ್‌ ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು, ಗೆಲುವಿಗಾಗಿ ಅಲ್ಲಾಹುವಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದರು. ನಂತರ ಅವರು ಈ ಪೋಸ್ಟ್‌ ಗೆ ಬಲಪಂಥೀಯರಿಂದ ಟೋಲ್‌ ಗೆ ಒಳಗಾಗಿದ್ದಾರೆ.

ಗೆಲುವಿನ ಬಳಿಕ ದೇವರಿಗೆ ಧನ್ಯವಾದ ಸಲ್ಲಿಸಿದ ಕೊಹ್ಲಿ ಅವರ ಬಗ್ಗೆ ವ್ಯಾಪಕ ಪ್ರಶಂಸೆಗಳು ಹರಿದು ಬಂದಿವೆ ಮತ್ತು ಅವರ ದೈವಭಕ್ತಿಯನ್ನು ಅನೇಕರು ಕೊಂಡಾಡಿದ್ದಾರೆ. ಹಲವಾರು ಅಭಿಮಾನಿಗಳು ಅವರನ್ನು ‘ನಿಜವಾದ ಸನಾತನಿ ’ಎಂದು ಬಣ್ಣಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ,ಸಿರಾಜ್ ಗೆಲುವಿಗಾಗಿ ಅಲ್ಲಾಹುವಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದು ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗದಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಪ್ರತಿಕ್ರಿಯೆಗಳು ಅವರ ಧಾರ್ಮಿಕ ಉಲ್ಲೇಖದ ಪ್ರಸ್ತುತತೆಯನ್ನು ಪ್ರಶ್ನಿಸಿದ್ದು,ಇದು ಕೊಹ್ಲಿ ಸ್ವೀಕರಿಸಿದ ಪ್ರಶಂಸೆಗಳ ಧಾಟಿಗೆ ಹೋಲಿಸಿದರೆ ಸ್ಪಷ್ಟ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಟ್ವೀಟ್‌ಗಳು ಯುವಮನಸ್ಸುಗಳಲ್ಲಿ ಬೆಳೆಯುತ್ತಿರುವ ದ್ವೇಷವನ್ನು ಎತ್ತಿ ತೋರಿಸುತ್ತಿವೆ ಮತ್ತು ಇದು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯ ಸಂದರ್ಭಗಳಲ್ಲಿಯೂ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳಬಹುದು. ಇಬ್ಬಗೆ ನಿಲುವನ್ನು ಖಂಡಿಸಿರುವ ಹಲವು ಬಳಕೆದಾರರು ಎಲ್ಲ ಧಾರ್ಮಿಕ ಅಭಿವ್ಯಕ್ತಿಗಳನ್ನು ಗೌರವಿಸುವಂತೆ ಮತ್ತು ಸ್ವೀಕರಿಸುವಂತೆ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News