ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ | ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ, ಶೆಫಾಲಿ ವರ್ಮಾ ಔಟ್, ಹರ್ಲೀನ್ ಗೆ ಅವಕಾಶ
ಹೊಸದಿಲ್ಲಿ : ಮಹಿಳೆಯರ ಆಯ್ಕೆ ಸಮಿತಿಯು 16 ಸದಸ್ಯರ ಭಾರತದ ಮಹಿಳೆಯರ ಕ್ರಿಕೆಟ್ ತಂಡವನ್ನು ಮಂಗಳವಾರ ಪ್ರಕಟಿಸಿದ್ದು, ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾರನ್ನು ಕೈಬಿಡಲಾಗಿದೆ. ಹರ್ಲೀನ್ ಡೆವೊಲ್ ಸುಮಾರು ಒಂದು ವರ್ಷದ ನಂತರ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ.
ಆಸ್ಟ್ರೇಲಿಯದಲ್ಲಿ ನಡೆಯಲಿರುವ ಮುಂಬರುವ 3 ಪಂದ್ಯಗಳ ಏಕದಿನ ಸರಣಿಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವವಹಿಸಿದ್ದಾರೆ.
ಶೆಫಾಲಿ ಈ ವರ್ಷ ಆರು ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿದ್ದು, 33 ಗರಿಷ್ಠ ಸ್ಕೋರಾಗಿದೆ. ಉಮಾ ಚೆಟ್ರಿ, ದಯಾಳನ್ ಹೇಮಲತಾ, ಶ್ರೇಯಾಂಕಾ ಪಾಟೀಲ್ ಹಾಗೂ ಸಯಾಲಿ ಅವರನ್ನು ತಂಡದಿಂದ ಹೊರಗಿಡಲಾಗಿದೆ.ಹರ್ಲೀನ್ 2023ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ಮೊದಲೆರಡು ಪಂದ್ಯಗಳು ಡಿ.5 ಹಾಗೂ 8ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಡಿ.11ರಂದು ಪರ್ತ್‌ನಲ್ಲಿ ಕೊನೆಯ ಪಂದ್ಯ ನಡೆಯುವುದು.
*ಭಾರತ ತಂಡ: ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನ(ಉಪ ನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡೆವೊಲ್, ಯಸ್ತಿಕಾ ಭಾಟಿಯಾ(ವಿಕೆಟ್‌ಕೀಪರ್), ರಿಚಾ ಘೋಷ್(ವಿಕೆಟ್‌ಕೀಪರ್), ತೇಜಲ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಸೈಮಾ ಠಾಕೂರ್.