ನಮಗೆ ಮನೆಯಲ್ಲಿರುವ ಅನುಭವವಾಗುತ್ತಿದೆ : ಪಾಕಿಸ್ತಾನ ನಾಯಕ ಬಾಬರ್ ಅಝಂ

ಭಾರತದಲ್ಲಿ ದೊರೆತಿರುವ ಆತ್ಮೀಯ ಸ್ವಾಗತವನ್ನು ನಮ್ಮ ತಂಡವು ನಿರೀಕ್ಷಿಸಿರಲಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಹೇಳಿದ್ದಾರೆ

Update: 2023-10-05 17:21 IST
ನಮಗೆ ಮನೆಯಲ್ಲಿರುವ ಅನುಭವವಾಗುತ್ತಿದೆ : ಪಾಕಿಸ್ತಾನ ನಾಯಕ ಬಾಬರ್ ಅಝಂ

ಬಾಬರ್‌ ಅಝಂ PHOTO : PTI

  • whatsapp icon

ಹೈದರಾಬಾದ್: ಭಾರತದಲ್ಲಿ ದೊರೆತಿರುವ ಆತ್ಮೀಯ ಸ್ವಾಗತವನ್ನು ನಮ್ಮ ತಂಡವು ನಿರೀಕ್ಷಿಸಿರಲಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಹೇಳಿದ್ದಾರೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ನೆದರ್ ಲೆಂಡ್ಸ್ ತಂಡದ ವಿರುದ್ಧ ತಮ್ಮ ಪ್ರಥಮ ಪಂದ್ಯವನ್ನು ಆಡುವ ಮೂಲಕ ವಿಶ್ವಕಪ್ ಅಭಿಯಾನಕ್ಕೆ ಸಿದ್ಧವಾಗಲಿರುವ ಪಾಕಿಸ್ತಾನ ತಂಡವು, ಅದಕ್ಕೂ ಮುನ್ನ ಎರಡು ಪೂರ್ವಾಭ್ಯಾಸ ಪಂದ್ಯಗಳನ್ನಾಡಲು ಭಾರಿ ಬಿಗಿ ಭದ್ರತೆಯೊಂದಿಗೆ ಹೈದರಾಬಾದ್ ಗೆ ಆಗಮಿಸಿದೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಬಾಬರ್ ಅಝಂ, “ಭಾರತದಲ್ಲಿ ಉತ್ತಮ ಆತಿಥ್ಯ ಸಿಗುತ್ತಿದೆ. ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಇಲ್ಲಿನ ಜನರು ನಮ್ಮ ತಂಡದತ್ತ ತೋರುತ್ತಿರುವ ಪ್ರೀತಿಯನ್ನು ನಾವೆಲ್ಲರೂ ಆನಂದಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ನಾವು ಒಂದು ವಾರದಿಂದ ಹೈದರಾಬಾದ್ ನಲ್ಲಿದ್ದೇವೆ. ನಮಗೆ ನಾವು ಭಾರತದಲ್ಲಿದ್ದೇವೆ ಎಂದು ಅನ್ನಿಸುತ್ತಿಲ್ಲ. ಬದಲಿಗೆ, ನಮಗೆ ತವರಿನಲ್ಲಿದ್ದಂತೆ ಭಾಸವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಶೇ. 100ರಷ್ಟು ಸಾಮರ್ಥ್ಯವನ್ನು ಪ್ರದರ್ಶಿಸಿ, ಕ್ರೀಡಾಕೂಟವನ್ನು ಆನಂದಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.

ಅಕ್ಟೋಬರ್ 14ರಂದು 1,32,000 ಆಸನ ಸಾಮರ್ಥ್ಯವನ್ನು ಹೊಂದಿರುವ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ-ಭಾರತ ತಂಡಗಳು ಮುಖಾಮುಖಿಯಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News