ವಿಶ್ವಕಪ್ ಪಂದ್ಯದಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಪಾಕಿಸ್ತಾನದ ಬೌಲರ್ ಶಾಹೀನ್ ಅಫ್ರಿದಿ

Update: 2023-11-04 16:47 GMT

 ಶಾಹೀನ್ ಶಾ ಅಫ್ರಿದಿ (Photo- PTI)

ಬೆಂಗಳೂರು: ಶಾಹೀನ್ ಅಫ್ರಿದಿ ವಿಶ್ವಕಪ್ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಪಾಕಿಸ್ತಾನದ ಬೌಲರ್ ಎನಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಒಂದೂ ವಿಕೆಟ್ ಪಡೆಯದೆ 10 ಓವರ್‌ಗಳಲ್ಲಿ 90 ರನ್ ಬಿಟ್ಟುಕೊಟ್ಟರು.

ಹಾರಿಸ್ ರವೂಫ್ 10 ಓವರ್‌ಗಳಲ್ಲಿ 1 ವಿಕೆಟ್ ಪಡೆದು 85 ರನ್ ನೀಡಿದರು. ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಈ ದಾಖಲೆಯು ಹಸನ್ ಅಲಿ ಹೆಸರಲ್ಲಿತ್ತು. ಅಲಿ 2019ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಭಾರತ ವಿರುದ್ಧ 9 ಓವರ್‌ಗಳಲ್ಲಿ 84 ರನ್ ಸೋರಿಕೆ ಮಾಡಿದ್ದರು.

ವೇಗದ ಬೌಲರ್ ವಹಾಬ್ ರಿಯಾಝ್ ಏಕದಿನ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಪಾಕಿಸ್ತಾನದ ಬೌಲರ್ ಆಗಿದ್ದಾರೆ. ರಿಯಾಝ್ 2016ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ಓವರ್‌ಗಳಲ್ಲಿ 110 ರನ್ ಸೋರಿಕೆ ಮಾಡಿದ್ದರು.

ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ದುಬಾರಿ ಪ್ರದರ್ಶನ ನೀಡಿದ ಪಾಕಿಸ್ತಾನ ಬೌಲರ್‌ಗಳ ಪಟ್ಟಿಯಲ್ಲಿ ಶಾಹೀನ್ ಅಫ್ರಿದಿ ಅವರ ಸ್ಪೆಲ್ 6ನೇ ಸ್ಥಾನದಲ್ಲಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News