ರಣಜಿ: 17ರ ಹರೆಯದ ಆಯಷ್ ಮ್ಹಾತ್ರೆ ಶತಕ, ಮುಂಬೈ ಮೇಲುಗೈ

Update: 2024-10-18 17:21 GMT

ಮುಂಬೈ: ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡದ 17ರ ವಯಸ್ಸಿನ ಆಟಗಾರ ಆಯುಷ್ ಮ್ಹಾತ್ರೆ ಮಹಾರಾಷ್ಟ್ರದ ತಂಡದ ವಿರುದ್ಧ ಔಟಾಗದೆ 127 ರನ್(163 ಎಸೆತ, 17 ಬೌಂಡರಿ, 3 ಸಿಕ್ಸರ್) ಗಳಿಸಿ ಗಮನ ಸೆಳೆದಿದ್ದಾರೆ.

ತನ್ನ ಮೂರನೇ ಪ್ರಥಮ ದರ್ಜೆ ಪಂದ್ಯವನ್ನು ಆಡಿದ ಆಯುಷ್ ನಾಯಕ ಅಜಿಂಕ್ಯ ರಹಾನೆ ಜೊತೆ 3ನೇ ವಿಕೆಟ್‌ಗೆ 99 ರನ್ ಹಾಗೂ ಶ್ರೇಯಸ್ ಅಯ್ಯರ್(ಔಟಾಗದೆ 45) ಜೊತೆ 97 ರನ್ ಜೊತೆಯಾಟದಲ್ಲಿ ಭಾಗಿಯಾದರು. 24 ರನ್‌ಗೆ 2 ವಿಕೆಟ್ ಕಳೆದುಕೊಂಡ ಮುಂಬೈ ತಂಡಕ್ಕೆ ಆಯುಷ್ ಆಸರೆಯಾದರು.

ಇದಕ್ಕೂ ಮೊದಲು ಋತುರಾಜ್ ಗಾಯಕ್ವಾಡ್ ನೇತೃತ್ವದ ಮಹಾರಾಷ್ಟ್ರ ತಂಡವು ಮೋಹಿತ್ ಅವಸ್ಥಿ(3-31), ಶಾರ್ದೂಲ್ ಠಾಕೂರ್(2-51) ಹಾಗೂ ರಾಯ್‌ಸ್ಟನ್ ಡಯಾಸ್(2-2)ದಾಳಿಗೆ ಸಿಲುಕಿ ಕೇವಲ 126 ರನ್‌ಗೆ ಆಲೌಟಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News