ರಣಜಿ: ಮಹತ್ವದ ಮೈಲಿಗಲ್ಲು ತಲುಪಿದ ಗುಜರಾತ್ ಬೌಲರ್ ಸಿದ್ದಾರ್ಥ್ ದೇಸಾಯಿ

Update: 2025-01-23 19:53 IST
Siddharth Desai

ಸಿದ್ದಾರ್ಥ್ ದೇಸಾಯಿ | PC :Instagram

Read more at:

http://timesofindia.indiatimes.com/articleshow/117479523.cms?utm_source=contentofinterest&utm_medium=text&utm_campaign=cppst

  • whatsapp icon

ಹೊಸದಿಲ್ಲಿ: ಅಹ್ಮದಾಬಾದ್‌ನಲ್ಲಿ ಗುರುವಾರ ನಡೆದ ಉತ್ತರಾಖಂಡದ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಇನಿಂಗ್ಸ್‌ವೊಂದರಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಸಿದ್ದಾರ್ಥ್ ದೇಸಾಯಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದರು.

ಅತ್ಯುತ್ತಮ ಪ್ರದರ್ಶನ ನೀಡಿರುವ ದೇಸಾಯಿ, ಗುಜರಾತ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು.

ಎಡಗೈ ಸ್ಪಿನ್ನರ್ 36 ರನ್‌ಗೆ 9 ವಿಕೆಟ್‌ಗಳನ್ನು ಪಡೆದರು. 2012ರಲ್ಲಿ ಸೌರಾಷ್ಟ್ರದ ವಿರುದ್ಧ ರಾಕೇಶ್ ವಿನುಭಾಯ್ ನಿರ್ಮಿಸಿದ್ದ ದಾಖಲೆ(8-31)ಮುರಿದರು.

ಉತ್ತರಾಖಂಡದ ಇನಿಂಗ್ಸ್ 30 ಓವರ್‌ಗಳಲ್ಲಿ ಕೇವಲ 111 ರನ್‌ಗೆ ಕೊನೆಗೊಂಡಿದೆ. ವಿಶ್ವಾಲ್ ಜೈಸ್ವಾಲ್ ಉತ್ತರಾಖಂಡದ ಕೊನೆಯ ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News