ಯಜುವೇಂದ್ರ ಚಹಾಲ್ ಬೌಲಿಂಗ್ ಶ್ಲಾಘಿಸಿದ ಗೆಳತಿ ಆರ್‌ಜೆ ಮಹ್ವಾಶ

PC : Instagram
ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಅತ್ಯಮೋಘ ಬೌಲಿಂಗ್ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸುಲಭ ಜಯದ ಅವಕಾಶವನ್ನು ಕೈಚೆಲ್ಲಿತ್ತು. 112 ರನ್‌ಗಳ ಸುಲಭ ಗುರಿ ಪಡೆದಿದ್ದ ಕೆಕೆಆರ್ ತಂಡವು 95 ರನ್‌ಗೆ ಆಲೌಟಾಗಿರುವ ಕಾರಣ ಪಂಜಾಬ್ 16 ರನ್‌ಗಳ ರೋಚಕ ಜಯ ಸಾಧಿಸಿತ್ತು.
28 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಚಹಾಲ್ ಅವರು ಎದುರಾಳಿ ತಂಡದಿಂದ ಗೆಲುವನ್ನು ಕಸಿದುಕೊಂಡರು. ಚಹಾಲ್‌ಗೆ ಎಡಗೈ ವೇಗಿ ಮಾರ್ಕೊ ಜಾನ್ಸನ್ ಸಾಥ್ ನೀಡಿದರು.
ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಝಿಂಟಾ, ಪಂದ್ಯ ಗೆದ್ದ ಖುಷಿಯಲ್ಲಿ ಚಹಾಲ್ ರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ.
ಈ ನಡುವೆ ಚಹಾಲ್ ಅವರ ಗೆಳತಿ ಆರ್‌ಜೆ ಮಹ್ವಾಶ ಅವರು ಇನ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಚಹಾಲ್ ಅವರು ಪ್ರತಿಭಾನ್ವಿತ ವ್ಯಕ್ತಿ ಎಂದು ಹೊಗಳಿದ್ದಾರೆ.
ಚಹಾಲ್ ಜೊತೆಗಿನ ಸೆಲ್ಫಿ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ‘ಎಂತಹ ಪ್ರತಿಭಾನ್ವಿತ ವ್ಯಕ್ತಿ. ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬುದನ್ನು ಒಂದು ಕಾರಣವಿದೆ. ಅಸಂಭವ!’ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಧನಶ್ರೀ ಅವರೊಂದಿಗೆ ವಿಚ್ಛೇದನ ಪಡೆದ ನಂತರ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಮಹ್ವಾಶ ಅವರೊಂದಿಗೆ ಚಹಾಲ್ ಕಾಣಿಸಿಕೊಂಡಿದ್ದರು. ಅಲ್ಲಿಂದ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು.