ರಣಜಿ ಟ್ರೋಫಿಯಲ್ಲೂ ವಿಫಲರಾದ ಶ್ರೇಯಸ್ ಅಯ್ಯರ್

Update: 2024-03-03 16:13 GMT

 ಶ್ರೇಯಸ್ ಅಯ್ಯರ್ | Photo: X 



ಮುಂಬೈ: ರಣಜಿ ಪಂದ್ಯಗಳಲ್ಲಿ ಆಡಿಲ್ಲ ಎನ್ನುವ ಕಾರಣಕ್ಕಾಗಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೇಂದ್ರೀಯ ಗುತ್ತಿಗೆಯನ್ನು ನಿರಾಕರಿಸಿರುವುದು ದೊಡ್ಡ ಸುದ್ದಿಯಾಗಿದೆ.

ಆ ಬಳಿಕ, ಶ್ರೇಯಸ್ ಅಯ್ಯರ್ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಆಡಲು ತನ್ನ ತಂಡವಾದ ಮುಂಬೈಗೆ ಸೇರ್ಪಡೆಗೊಂಡರು. ಆದರೆ, ಅವರು ಯಶಸ್ವಿಯಾಗಲಿಲ್ಲ. ಅವರು 8 ಎಸೆತಗಳಲ್ಲಿ ಕೇವಲ 3 ರನ್ ಗಳನ್ನು ಗಳಿಸಿದರು.

ಬಿಸಿಸಿಐ ಗುತ್ತಿಗೆ ನಿರಾಕರಿಸುವ ಮೊದಲು, ಅವರು ರಣಜಿ ಟ್ರೋಫಿ ಪಂದ್ಯಗಳಿಂದ ತಪ್ಪಿಸಿಕೊಂಡಿದ್ದರು. ತಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಆದರೆ, ಎನ್ ಸಿ ಎ ನೀಡಿರುವ ದೈಹಿಕ ಕ್ಷಮತೆ ವರದಿಯಲ್ಲಿ ಅವರ ಬೆನ್ನು ನೋವಿನ ಉಲ್ಲೇಖವಿಲ್ಲ ಎಂದು ವರದಿಗಳು ಹೇಳಿವೆ.

ಅದೂ ಅಲ್ಲದೆ, ಕೋಲ್ಕತ ನೈಟ್ ರೈಡರ್ಸ್ ನ ಐಪಿಎಲ್ ಪೂರ್ವ ಶಿಬಿರದಲ್ಲಿ ಅಯ್ಯರ್ ಪಾಲ್ಗೊಂಡಿದ್ದಾರೆ ಎಂಬುದಾಗಿ ಹಲವು ವರದಿಗಳು ಹೇಳಿದ್ದವು. ಇದು ಬಿಸಿಸಿಐ ಆಯ್ಕೆಗಾರರ ಅಸಹನೆಗೆ ಕಾರಣವಾಗಿತ್ತು.

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ರವಿವಾರ ಮುಂಬೈನ ಮೊದಲ ಇನಿಂಗ್ಸ್ ನಲ್ಲಿ ಆರನೇ ಕ್ರಮಾಂಕದಲ್ಲಿ ಆಡಲು ಇಳಿದ ಅಯ್ಯರ್ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಮೂರು ರನ್ ಗಳನ್ನು ಗಳಿಸಿದ ಅವರು ಸಂದೀಪ್ ವಾರಿಯರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಗೆ ವಾಪಸಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News