ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಈ ವಿಶಿಷ್ಟ ಸಾಧನೆ ಮಾಡಿದ ಮೊದಲ ಭಾರತೀಯ

ಔಟಾಗದೆ 143 ರನ್ ನಿಂದ ಮೂರನೇ ದಿನ ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಗೆ ಇತಿಹಾಸ ನಿರ್ಮಿಸಲು ಕೇವಲ 7 ರನ್ ಗಳ ಅಗತ್ಯವಿತ್ತು. 150ರನ್ ಗಳ ಗಡಿ ದಾಟಲು ಹೆಚ್ಚು ಸಮಯ ವ್ಯರ್ಥ ಮಾಡದ ಜೈಸ್ವಾಲ್ , ವಿದೇಶಿ ನೆಲದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಳ್ಳುವುದರೊಂದಿಗೆ ವಿಶಿಷ್ಟ ಸಾಧನೆ ಮಾಡಿದರು.

Update: 2023-07-15 05:01 GMT

ಡೊಮಿನಿಕಾ: ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತನ್ನ ಚೊಚ್ಚಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಸಿಡಿಸುವ ಮೂಲಕ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ಎರಡನೇ ದಿನದಾಟದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ ಜೈಸ್ವಾಲ್ 3 ನೇ ದಿನವಾದ ಶುಕ್ರವಾರ 150 ರನ್ ಗಳ ಗಡಿಯನ್ನು ದಾಟಿದರು, ಔಟಾಗದೆ 143 ರನ್ ನಿಂದ ಮೂರನೇ ದಿನ ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಗೆ ಇತಿಹಾಸ ನಿರ್ಮಿಸಲು ಕೇವಲ 7 ರನ್ ಗಳ ಅಗತ್ಯವಿತ್ತು. 150ರನ್ ಗಳ ಗಡಿ ದಾಟಲು ಹೆಚ್ಚು ಸಮಯ ವ್ಯರ್ಥ ಮಾಡದ ಜೈಸ್ವಾಲ್ , ವಿದೇಶಿ ನೆಲದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಳ್ಳುವುದರೊಂದಿಗೆ ವಿಶಿಷ್ಟ ಸಾಧನೆ ಮಾಡಿದರು.

ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ದಾಖಲೆ ಈಗಲೂ ಶಿಖರ್ ಧವನ್ ಹೆಸರಲ್ಲಿದೆ. ಧವನ್ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮಾರ್ಚ್ 2013 ರಲ್ಲಿ 187 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಕೂಡ ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ ನಲ್ಲಿ 177 ರನ್ ಗಳಿಸಿದ್ದರು ಆದರೆ ಅವರು 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಈ ಸಾಧನೆ ಮಾಡಿದ್ದರು.

ಜೈಸ್ವಾಲ್ 171 ರನ್ ಗಳಿಸಿ ಔಟಾದರು, ಹೀಗಾಗಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ಸ್ಕೋರ್ ಗಳಿಸಿದ ಸಾಧನೆ ಮಾಡಿದರು.

ವೆಸ್ಟ್ ಇಂಡೀ ಸ್ ವಿರುದ್ಧದ  ಮೊದಲ ಟೆಸ್ಟ್ ನ ಎರಡನೇ ದಿನವಾದ ಗುರುವಾರ 21 ವರ್ಷ ವಯಸ್ಸಿನ ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಗಳಿಸಿದ 17 ನೇ ಭಾರತೀಯ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News