ಎರಡನೇ ಟೆಸ್ಟ್ ಶತಕ ಪೂರೈಸಿದ ಯಶಸ್ವಿ ಜೈಸ್ವಾಲ್

Update: 2024-02-02 15:25 GMT

ಜೈಸ್ವಾಲ್ | Photo: PTI 

 

ವಿಶಾಖಪಟ್ಟಣ: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು.

ಶುಕ್ರವಾರ ಆರಂಭವಾದ ದ್ವಿತೀಯ ಟೆಸ್ಟ್ ಮೊದಲ ದಿನವಾದ ಶುಕ್ರವಾರ ಜೈಸ್ವಾಲ್ ಸಾಧನೆ ಮಾಡಿದರು.

ಎಡಗೈ ಬ್ಯಾಟರ್ ಜೈಸ್ವಾಲ್ ಎಡಗೈ ಸ್ಪಿನ್ನರ್ ಟಾಮ್ ಹಾಟ್ಲಿ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಮೈಲಿಗಲ್ಲು ತಲುಪಿದರು.

ಜೈಸ್ವಾಲ್ 151 ಎಸೆತಗಳನ್ನು ಎದುರಿಸಿ 11 ಬೌಂಡರಿ, 3 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ವೀಡಿಯೊವನ್ನು ಎಕ್ಸ್ ನಲ್ಲಿ ಬಿಸಿಸಿಐ ಹಂಚಿಕೊಂಡಿದೆ.

ಕಳೆದ ವರ್ಷ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದ ನಂತರ ಆರನೇ ಟೆಸ್ಟ್ ಪಂದ್ಯವನ್ನಾಡಿದ ಜೈಸ್ವಾಲ್ ಹೈದರಾಬಾದ್ ನಲ್ಲಿ ನಡೆದಿದ್ದ ಪ್ರಥಮ  ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್ ನಲ್ಲಿ 80 ರನ್ ಗಳಿಸಿದ್ದರು. ಭಾರತವು ನಾಲ್ಕನೇ ದಿನದಾಟದಲ್ಲಿ 28 ರನ್ನಿಂದ ಸೋಲುಂಡಿತ್ತು.

ಜೈಸ್ವಾಲ್ ಕಳೆದ ವರ್ಷ ಜುಲೈನಲ್ಲಿ ಡೊಮಿನಿಕಾದಲ್ಲಿ ಆಡಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ 171 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News