ಸಿಡ್ನಿ ಟೆಸ್ಟ್ ಬೇಗನೆ ಮುಕ್ತಾಯ: ಟಿಕೆಟ್ ಸಿಗದೆ ಆಸ್ಟ್ರೇಲಿಯದಲ್ಲಿ ಭಾರತ ತಂಡದ ಪರದಾಟ

Update: 2025-01-06 16:07 GMT

PC : PTI 

ಸಿಡ್ನಿ: ಕಳೆದ ಎರಡು ತಿಂಗಳುಗಳಿಂದ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಟಿಕೆಟ್ ಸಿಗದ ಕಾರಣ ಸ್ವದೇಶಕ್ಕೆ ತಕ್ಷಣವೇ ವಾಪಸಾಗಲು ಸಾಧ್ಯವಾಗಿಲ್ಲ. ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಪಂದ್ಯವು ಮೂರೇ ದಿನದಲ್ಲಿ ರವಿವಾರ ಕೊನೆಗೊಂಡಿರುವುದು ಇದಕ್ಕೆ ಕಾರಣವಾಗಿದೆ.

ಭಾರತ ಕ್ರಿಕೆಟ್ ತಂಡದ ಆಟಗಾರರು ಜ.೮ರಂದು ಆಸ್ಟ್ರೇಲಿಯದಿಂದ ಹೊರಡಲು ನಿರ್ಧರಿಸಿದ್ದರು. ಆದರೆ ೫ನೇ ಟೆಸ್ಟ್ ಪಂದ್ಯವು ಎರಡು ದಿನ ಮೊದಲೇ ಮುಕ್ತಾಯಗೊಂಡ ಕಾರಣ ಕೆಲವು ಆಟಗಾರರು ಬೇಗನೆ ಹೊರಡಲು ಸಿದ್ದರಾಗಿದ್ದಾರೆ. ಆದರೆ ಎಲ್ಲವೂ ಟಿಕೆಟ್ ಲಭ್ಯತೆಯನ್ನು ಅವಲಂಬಿಸಿದೆ.

ಟಿಕೆಟ್ ಲಭಿಸಿದ ತಕ್ಷಣವೇ ತಂಡದ ನಿರ್ಗಮನದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಬಹುತೇಕ ಆಟಗಾರರು ನವೆಂಬರ್ ೨ನೇ ವಾರ ವಿವಿಧ ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಕ್ಕೆ ಆಗಮಿಸಿದ್ದರು. ವಿರಾಟ್ ಕೊಹ್ಲಿ ನವೆಂಬರ್ ೧೦ರಂದು ಆಸ್ಟ್ರೇಲಿಯಕ್ಕೆ ಬಂದಿಳಿದಿದ್ದರು.

ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಗೆದ್ದ ನಂತರ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಕೇವಲ ಒಂದರಲ್ಲಿ ಡ್ರಾ ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News