ಸೈಯದ್ ಮುಶ್ತಾಕ್ ಅಲಿ ಟ್ರೋಫಿ : ಬಂಗಾಳ ತಂಡಕ್ಕೆ ಶಮಿ ಸೇರ್ಪಡೆ

Update: 2024-11-19 17:38 GMT

ಮುಹಮ್ಮದ್ ಶಮಿ |   PC: x.com/cricbuzz

ಹೊಸದಿಲ್ಲಿ : ರಣಜಿ ಟ್ರೋಫಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿರುವ ವೇಗದ ಬೌಲರ್ ಮುಹಮ್ಮದ್ ಶಮಿ ಅವರನ್ನು ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಗಾಗಿ ಬಂಗಾಳ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಪಂದ್ಯಾವಳಿಯು ನವೆಂಬರ್ 23ರಂದು ಆರಂಭಗೊಳ್ಳಲಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಬಳಿಕ, ಶಮಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಿರುವುದು ಈ ವರ್ಷದ ರಣಜಿ ಪಂದ್ಯದಲ್ಲಿ. ಇಂದೋರ್‌ ನಲ್ಲಿ ಮಧ್ಯಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಅವರ ಬೌಲಿಂಗ್ ನೆರವಿನಿಂದ ಬಂಗಾಳ ತಂಡವು ವಿಜಯಿಯಾಗಿತ್ತು.

ಈಗ ತನ್ನ ಫಾರ್ಮ್ ಮತ್ತು ದೈಹಿಕ ಕ್ಷಮತೆಯನ್ನು ಸಾಬೀತುಪಡಿಸಲು ಸೈಯದ್ ಮುಶ್ತಾಕ್ ಅಲಿ ಪಂದ್ಯಾವಳಿಯು ಅವರಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.

ನವೆಂಬರ್ 23ರಂದು ರಾಜ್‌ಕೋಟ್‌ನಲ್ಲಿ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಂಜಾಬ್ ವಿರುದ್ಧ ಅವರ ಬಂಗಾಳ ತಂಡವು ಆಡಲಿದೆ. ಇದು ಐಪಿಎಲ್ 2023ರ ಫೈನಲ್ ಬಳಿಕ ಶಮಿ ಅವರ ಮೊದಲ ಟಿ20 ಪಂದ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News