ಸ್ಕ್ವಾಷ್ ವಿಶ್ವ ಚಾಂಪಿಯನ್‌ಶಿಪ್ ಗೆ ವೀರ್ ಚೋಟ್ರಾಣಿ, ಅನಾಹತ್ ಸಿಂಗ್ ಅರ್ಹತೆ

ಹೊಸದಿಲ್ಲಿ: ವೀರ್ ಚೋಟ್ರಾಣಿ ಹಾಗೂ ಅನಾಹತ್ ಸಿಂಗ್ ರವಿವಾರ ಮಲೇಶ್ಯದ ಕೌಲಾಲಂಪುರದಲ್ಲಿ ಏಶ್ಯನ್ ಕ್ವಾಲಿಫೈಯರ್ಸ್ ನಲ್ಲಿ ಗೆದ್ದ ನಂತರ ಮುಂದಿನ ತಿಂಗಳು ನಡೆಯಲಿರುವ ಸ್ಕ್ವಾಷ್ ವಿಶ್ವ ಚಾಂಪಿಯನ್ ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವೀರ್ ಚೋಟ್ರಾಣಿ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಮಿತ್ ಟಂಡನ್, ಅಭಯ್ ಸಿಂಗ್ ಹಾಗೂ ವೆಲಾವನ್ ಸೆಂಥಿಲ್ಕುಮಾರ್ರನ್ನು ಸೇರ್ಪಡೆಯಾದರು.
ಚಿಕಾಗೊದಲ್ಲಿ ಮೇ 9ರಿಂದ 17ರ ತನಕ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಅನಾಹತ್ ಸಿಂಗ್ ಮಾತ್ರ ಭಾರತವನ್ನು ಪ್ರತಿನಿಧಿಸಲಿದ್ದಾರೆ.
17ರ ವಯಸ್ಸಿನ ಅನಾಹತ್ ಸಿಂಗ್ ಹಾಂಕಾಂಗ್ನ ಟೊಬಿ ಸೆ ಅವರನ್ನು 3-1(11-4, 9-11, 11-2,11-8)ಅಂತರದಿಂದ ಸೋಲಿಸಿದರು. ಈ ಮೂಲಕ ಮೊದಲ ಬಾರಿ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದರು.
2ನೇ ಶ್ರೇಯಾಂಕದ ಚೋಟ್ರಾಣಿ 26 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಮೀಶೇನ್ರಾಜ್ ಚಂದ್ರನ್ ವಿರುದ್ಧ 3-0(11-3, 11-4, 11-8) ಅಂತರದಿಂದ ಜಯ ಸಾಧಿಸಿದರು.