ಐಪಿಎಲ್ ನಲ್ಲಿ ಗರಿಷ್ಠ ಅರ್ಧಶತಕ ಗಳಿಸಿ ವಾರ್ನರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
Image Source : BCCI/IPL
ಚಂಡಿಗಡ: ಆರ್ಸಿಬಿಯ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸುವ ಮೂಲಕ ಐಪಿಎಲ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದರು.
ರವಿವಾರ ಮುಲ್ಲನ್ಪುರದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ 54 ಎಸೆತಗಳಲ್ಲಿ ಔಟಾಗದೆ 73 ರನ್ ಗಳಿಸಿದರು. ಐಪಿಎಲ್ ನಲ್ಲಿ 59ನೇ ಅರ್ಧಶತಕ ಪೂರೈಸಿದರು. 67ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸುವ ಮೂಲಕ ಡೇವಿಡ್ ವಾರ್ನರ್(66)ದಾಖಲೆ ಮುರಿದರು.
ಕೊಹ್ಲಿ ಇದೀಗ 59 ಅರ್ಧಶತಕ ಹಾಗೂ 8 ಶತಕಗಳೊಂದಿಗೆ ಐಪಿಎಲ್ ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ವಾರ್ನರ್ 62 ಅರ್ಧಶತಕ ಹಾಗೂ 4 ಶತಕಗಳನ್ನು ಗಳಿಸಿದ್ದಾರೆ.
► ಐಪಿಎಲ್ ನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್ ಗಳಿಸಿದ ಆಟಗಾರರು
67-ವಿರಾಟ್ ಕೊಹ್ಲಿ(8 ಶತಕ)
66-ಡೇವಿಡ್ ವಾರ್ನರ್(4 ಶತಕ)
53-ಶಿಖರ್ ಧವನ್(2 ಶತಕ)
45-ರೋಹಿತ್ ಶರ್ಮಾ(2 ಶತಕ)
43-ಕೆ.ಎಲ್.ರಾಹುಲ್(4 ಶತಕ)
43-ಎಬಿ ಡಿ ವಿಲಿಯರ್ಸ್(3 ಶತಕ)