ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗಿದ್ದು, ಶುಕ್ರವಾರದಂದು ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ನಮೂದಾಗಿದೆ. ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್‍ಗೆ ತಾಪಮಾನ ಏರಿಕೆಯಾಗಿದೆ. ಬೀದರ್ ನಲ್ಲಿ 38.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ.
ಕರಾವಳಿ ಪ್ರದೇಶಗಳಾದ ಹೊನ್ನಾವರ 33.5, ಕಾರವಾರ 33.8, ಮಂಗಳೂರು ಮತ್ತು ಪಣಂಬೂರು 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ 31.5, ಬೆಳಗಾವಿ ವಿಮಾನ ನಿಲ್ದಾಣ 32, ಬಾಗಲಕೋಟೆ 36.4, ಧಾರವಾಡ 33, ಗದಗ 35.6, ಹಾವೇರಿ 31.6, ಕೊಪ್ಪಳ 34.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು 33, ಚಾಮರಾಜನಗರ 32, ಚಿಕ್ಕಮಗಳೂರು 25, ಚಿತ್ರದುರ್ಗ 33, ದಾವಣಗೆರೆ 33.5, ಹಾಸನ 30, ಚಿಂತಾಮಣಿ 35.1, ಮಂಡ್ಯ 33, ಮಡಿಕೇರಿ 30, ಮೈಸೂರು 34, ಶಿವಮೊಗ್ಗ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಟ ಉಷ್ಣಾಂಶ ದಾಖಲಾಗಿದೆ.