ರಾಜ್ಯದಲ್ಲಿ ಲಿಕ್ವಿಡ್ ನೈಟ್ರೋಜೆನ್ ಬಳಕೆ ನಿಷೇಧ

Update: 2024-05-30 20:38 IST
ರಾಜ್ಯದಲ್ಲಿ ಲಿಕ್ವಿಡ್ ನೈಟ್ರೋಜೆನ್ ಬಳಕೆ ನಿಷೇಧ

ಸಾಂದರ್ಭಿಕ ಚಿತ್ರ (Credit: Freepik)

  • whatsapp icon

ಬೆಂಗಳೂರು: ರಾಜ್ಯದ ಕೆಲವು ಪ್ರದೇಶಗಳಲ್ಲಿ ಸ್ಮೋಕಿಂಗ್ ಬಿಸ್ಕೆಟ್ ಹಾಗೂ ಡೆಸಟ್ರ್ಸ್ ಸೇರಿ ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜೆನ್‍ಅನ್ನು ಬಳಸುವುದರಿಂದ ಸಾರ್ವಜನಿಕರ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಲಿಕ್ವಿಡ್ ನೈಟ್ರೋಜೆನ್ ಅನ್ನು ನಿಷೇಧಿಸಲಾಗಿದೆ.

ಇದನ್ನು ಉಲ್ಲಂಘನೆ ಮಾಡಿದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮ 59 ರಡಿ 7 ವರ್ಷಗಳ ಅವಧಿಯ ಜೀವಾವಧಿ, ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷ ರೂ.ಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News