ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ: ಯತ್ನಾಳ್

Update: 2025-02-20 19:48 IST
ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ: ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್

  • whatsapp icon

ಬೆಂಗಳೂರು: ಹೈಕಮಾಂಡ್ ನನಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ, ಉತ್ತರ ಕೊಟ್ಟಿದ್ದೇನೆ ಎಂಬುದು ವಿಜಯೇಂದ್ರಗೆ ಹೇಗೆ ಗೊತ್ತು?, ಅವರು ಏನೆಲ್ಲಾ ಮ್ಯಾನೇಜ್ ಮಾಡುತ್ತಿದ್ದಾರೆಂದು ನನಗೆ ಗೊತ್ತು. ಇದೆಲ್ಲ ನಕಲಿ ನಾಟಕಗಳು, ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ತಮಗೆ ಶೋಕಾಸ್ ನೋಟಿಸ್ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶೋಕಾಸ್ ನೋಟಿಸ್ ಪತ್ರವನ್ನು ಮಾಧ್ಯಮಗಳಿಗೆ ಕೊಟ್ಟಿರುವುದು ವಿಜಯೇಂದ್ರ. ನಾನು ಉತ್ತರ ಕೊಟ್ಟಿದ್ದೇನಾ, ಬಿಟ್ಟಿದ್ದಿನಾ ಎಂಬುದನ್ನು ವಿಜಯೇಂದ್ರ ಬಳಿಯೇ ಕೇಳಿ ಎಂದರು.

ನನಗೆ ಇಮೇಲ್‍ಗೆ ನೋಟಿಸ್ ಬರುವುದು, ಅದು ಬಿಡುಗಡೆ ಆಗುತ್ತದೆ ಎಂದರೆ ಅದನ್ನು ವಿಜಯೇಂದ್ರ ಅವರೇ ಮಾಡಿದ್ದಾರೆ. ಈ ನೋಟಿಸ್‍ಗೆ ಉತ್ತರನೂ ವಿಜಯೇಂದ್ರ ಅವರೇ ಕೊಟ್ಟಿರಬೇಕಲ್ಲವೇ?, ನನಗೆ ಬರುವ ಮೊದಲೇ ನೋಟಿಸ್ ಲೀಕ್ ಆಯಿತು, ಅದನ್ನು ಯಾರು ಮಾಡಿದರು? ಎಂದು ಯತ್ನಾಳ್ ಪ್ರಶ್ನಿಸಿದರು.

ಯತ್ನಾಳ್‍ಗೆ ನೋಟಿಸ್ ಬಂದಿದೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬರುತ್ತಿವೆ. ಯಾವ ಮಾಧ್ಯಮದವರಲ್ಲಿ ನೋಟಿಸ್ ಪತ್ರವಿದೆ ಎಂಬುದನ್ನು ತೋರಿಸಿ. ನನಗೆ ಹೈಕಮಾಂಡ್ ಕ್ಯಾಕರಿಸಿ ಉಗಿದಿದೆ ಎಂದು ಒಂದು ಮಾಧ್ಯಮದಲ್ಲಿ ಸುದ್ದಿ ಆಯಿತು. ಯಾವುದಾದರೂ ಶಿಸ್ತು ಸಮಿತಿ ಉಗಿಯುವ ರೀತಿಯಲ್ಲಿ ನೋಟಿಸ್ ಬಂದಿದೆಯಾ? ಎಂದು ಯತ್ನಾಳ್ ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News