ಹಾಸನ | ರೀಲ್ಸ್'ಗಾಗಿ ನಕಲಿ ಗನ್ ಹಿಡಿದು ಬೈಕಿನಲ್ಲಿ ಓಡಾಟ: ಯುವಕರು ಪೊಲೀಸ್ ವಶಕ್ಕೆ

Update: 2023-06-30 18:45 IST
ಹಾಸನ | ರೀಲ್ಸ್ಗಾಗಿ ನಕಲಿ ಗನ್ ಹಿಡಿದು ಬೈಕಿನಲ್ಲಿ ಓಡಾಟ: ಯುವಕರು ಪೊಲೀಸ್ ವಶಕ್ಕೆ

ವಶಕ್ಕೆ ಪಡೆಯಲಾದ ನಕಲಿ ಗನ್

  • whatsapp icon

ಹಾಸನ: ರೀಲ್ಸ್ ವಿಡಿಯೊಗಾಗಿ ನಕಲಿ ಗನ್ ಹಿಡಿದು ಬುಲೆಟ್ ಬೈಕಿನಲ್ಲಿ ಓಡಾಡಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವಕರು ಗನ್ ಹಿಡಿದು ಮನಬಂದಂತೆ ಹಾಡುಹಗಲೇ ನಗರದ ಆರ್.ಸಿ.ರೋಡ್, 80 ಅಡಿ ರಸ್ತೆ, ರಿಂಗ್ ರಸ್ತೆಯಲ್ಲಿ ಬುಲೆಟ್ ಬೈಕ್‌ನಲ್ಲಿ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇಬ್ಬರು ಯುವಕರು ಬೈಕಿನಲ್ಲಿ ಓಡಾಡುತ್ತಿದ್ದು, ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಕೈಯಲ್ಲಿ ನಕಲಿ ಗನ್ ಇತ್ತು. ರೀಲ್ಸ್ ಗಾಗಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಉವಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. 

ವಶಕ್ಕೆ ಪಡೆದ ಪೊಲೀಸರು: ನಕಲಿ ಗನ್ ಹಿಡಿದು ಓಡಾಡಿದ್ದ ಇಬ್ಬರು ಬೈಕ್‌ ಸವಾರರನ್ನು ಹಾಸನ ಪೊಲೀಸರು ಬುಲೆಟ್ ಬೈಕ್ ಮತ್ತು ನಕಲಿ ಗನ್ ಸಮೇತ ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News