ಗ್ರಾಮ ಪಂಚಾಯಿತಿ ಉಪಚುನಾವಣೆ ಮುಂದೂಡಿಕೆ
Update: 2025-04-21 20:49 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಚುನಾವಣೆ ಸಿದ್ದತೆಗೆ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ 222 ಗ್ರಾಮ ಪಂಚಾಯಿತಿಗಳ ಉಪಚುನಾವಣೆಯನ್ನು 15 ದಿನಗಳ ಕಾಲ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಮರಬಳ್ಳಿ ತಿಳಿಸಿದ್ದಾರೆ.
ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಚುನಾವಣೆ ಸಿದ್ಧತೆಗೆ ಕಾಲಾವಕಾಶ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಕೋರಿರುವ ಹಿನ್ನೆಲೆಯಲ್ಲಿ ಇನ್ನೂ 15 ದಿನಗಳ ಮಟ್ಟಿಗೆ ಗ್ರಾ.ಪಂ. ಉಪ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎ.22ರಂದು ಚುನಾವಣಾ ಅಧಿಸೂಚನೆ ಮತ್ತು ಮೇ 11 ಮತದಾನ, 14ರಂದು ಫಲಿತಾಂಶ ಪ್ರಕಟ ಎಂದು ಈ ಮೊದಲು ರಾಜ್ಯ ಚುನಾವಣಾ ಆಯೋಗವು ಘೋಷಿಸಿತ್ತು.