ರಾಹುಲ್ ವಿರುದ್ಧ ಸೇಡಿನ ಕ್ರಮ ಖಂಡಿಸಿ ಜು.12ಕ್ಕೆ ಕಾಂಗ್ರೆಸ್ ‘ಮೌನ ಪ್ರತಿಭಟನೆ'
Update: 2023-07-08 19:17 GMT
ಬೆಂಗಳೂರು, ಜು. 8: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರನ್ನು ದೋಷಿ ಎಂದು ಸಾಬೀತುಪಡಿಸಲು ಪ್ರಧಾನಿ ಮೋದಿ ಮತ್ತು ಬಿಜೆಪಿ ಸೇಡಿನ ಕ್ರಮ ಅನುಸರಿಸುತ್ತಿದೆ ಎಂದು ಆರೋಪಿಸಿ ಜು.12ರ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಎಲ್ಲ ಜಿಲ್ಲಾ ಕಾಂಗ್ರೆಸ್ ಘಟಕಗಳಿಂದ ‘ಮೌನ ಪ್ರತಿಭಟನೆ’ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಎಲ್ಲ ಜಿಲ್ಲಾ ಡಿಸಿಸಿ/ಬಿಸಿಸಿ ಘಟಕಗಳು ಜು.12ರಂದು ಮಹಾತ್ಮ ಗಾಂಧಿ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಬಳಿ ಒಂದು ದಿನದ ಮೌನ ಸತ್ಯಾಗ್ರಹ ನಡೆಸಬೇಕು. ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲ ನಾಯಕರು, ಸ್ಥಳೀಯ ಮುಖಂಡರು ಹಾಗೂ ಎಲ್ಲ ಪದಾಧಿಕಾರಿಗಳು ಪಾಲ್ಗೊಳ್ಳಬೇಕು’ ಎಂದು ಸೂಚನೆ ನೀಡಿದ್ದಾರೆ.