ರೈತರು ಹೊಸ ತಂತ್ರಜ್ಞಾನಗಳ ಬಳಕೆಗೆ ಆದ್ಯತೆ ನೀಡಲಿ: ಸಚಿವ ಎಂ.ಸಿ ಸುಧಾಕರ್

Update: 2024-01-07 15:35 GMT

ಬೆಂಗಳೂರು: ಹೆಚ್ಚಿನ ಇಳುವರಿ, ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಗೆ ರೈತರು ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕರೆ ನೀಡಿದ್ದಾರೆ.

ರವಿವಾರ ನಗರದಲ್ಲಿ ನಡೆದ ಶ್ರೀ ಸಿಂಧೂರಿ ಅಗ್ರೋ ಟೆಕ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಂಧೂರಿ ಅಗ್ರೋ ಟೆಕ್ ಸಂಸ್ಥೆಯ ಸಾವಯವ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆದ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ವ್ಯವಸಾಯ ಪದ್ದತಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರೈತರು ಆಧುನಿಕ ಆವಿಷ್ಕಾಕರಗಳನ್ನು ಅಳವಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಜನರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಗುಣಮಟ್ಟದ ಉತ್ಪನ್ನಗಳನ್ನ ಉತ್ಪಾದಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳು ರೈತರಿಗೆ ಸಹಾಯ ಮಾಡುತ್ತವೆ. ಸಾವಯವ ಕೃಷಿ ಉತ್ಪನ್ನಗಳತ್ತಲೂ ಹೆಚ್ಚಿನ ಒಲವು ಇದ್ದು, ರೈತರು ಸಾವಯವ ಕೃಷಿಗೂ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕೃಷಿ ಕ್ಷೇತ್ರವನ್ನು ಹೆಚ್ಚು ಶಕ್ತಿಯುತಗೊಳಿಸಿದಾಗ ದೇಶವನ್ನು ಸಧೃಢಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿಂಧೂರಿ ಅಗ್ರೋ ಟೆಕ್‌ ನಂತಹ ಸಂಸ್ಥೆಗಳು ಸರಕಾರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. 25 ವರ್ಷಗಳಿಂದ ಉತ್ತಮ ಸಾವಯವ ಸೂಕ್ಷ್ಮ ಪೋಷಕಾಂಶಗಳ ಉತ್ಪನ್ನಗಳನ್ನು ನೀಡುವ ಮೂಲಕ ರೈತರ ಬದುಕನ್ನು ಹಸನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದರು.

ರೈತರು ತಮ್ಮ ಜಮೀನಿನ ಮಣ್ಣಿನ ಸತ್ವವನ್ನು ಪರೀಕ್ಷಿಸಿಕೊಳ್ಳಬೇಕು. ಹಾಗೂ ಅದಕ್ಕೆ ಬೇಕಾದ ಉತ್ತಮ ಪೂರಕ ಪೋಷಕಾಂಶಗಳನ್ನು ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಬೆಳೆಗಳನ್ನು ಬೆಳೆಯಬೇಕು. ಸಿರಿಧಾನ್ಯಗಳ ಬಗ್ಗೆ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದು, ರಾಜ್ಯ ಸರಕಾರ ಅವುಗಳ ಪ್ರೋತ್ಸಾಹಕ್ಕೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಿಂಧೂರಿ ಅಗ್ರೊ ಟೆಕ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕನಗಾಲ ಸತ್ಯನಾರಾಯಣ, ಆಂಧ್ರಪ್ರದೇಶದ ಮಾಜಿ ಕೃಷಿ ಸಚಿವ ಕನ್ನಾ ಲಕ್ಷ್ಮೀನಾರಾಯಣ, ಕನಿಗಿರಿ ಮಾಜಿ ಶಾಸಕ ಡಾ.ಎಂ.ಉಗ್ರ ನರಸಿಂಹ ರೆಡ್ಡಿ, ಅರ್ಬನ್ ಬ್ಯಾಂಕ್ ನ ಶ್ರೀನಿವಾಸ್ ಯಾದವ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News