ಹಾಸನ: ಡಿಸಿ ಕಚೇರಿಯ ಎಸ್‌ಡಿಎ ಆತ್ಮಹತ್ಯೆ

Update: 2023-11-25 23:46 IST
ಹಾಸನ: ಡಿಸಿ ಕಚೇರಿಯ ಎಸ್‌ಡಿಎ ಆತ್ಮಹತ್ಯೆ
  • whatsapp icon

ಹಾಸನ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಎಸ್‌ಡಿಎ ನಗರದ ರಕ್ಷಣಾಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಡನೆ ಶನಿವಾರ ವರದಿಯಾಗಿದೆ

ಮೃತಪಟ್ಟವರನ್ನು ಸುಚಿತ್ರಾ(31)ಎಂದು ಗುರುತಿಸಲಾಗಿದೆ. ಇವರ ಪತಿ ಕೃಷ್ಣಮೂರ್ತಿ ಗ್ರಾಮಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಅವರು ನಿಧನ ಹೊಂದಿದ್ದರು. ಬಳಿಕ ಸುಚಿತ್ರಾಗೆ ಅನುಕಂಪದ ಆಧಾರದಲ್ಲಿ ಎಸ್‌ಡಿಎ ಹುದ್ದೆ ನೀಡಲಾಗಿತ್ತು. ಸುಚಿತ್ರಾ ಜಿಲ್ಲಾಧಿಕಾರಿ ಕಚೇರಿಯ ಗ್ರಾಮ ಒನ್ ಕೇಂದ್ರದಲ್ಲಿ ಎಸ್‌ಡಿಎ ಆಗಿ ಸುಚಿತ್ರಾ ಕೆಲಸ ಮಾಡುತ್ತಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಅಥವಾ ಇತ್ಯಾದಿ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News