ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವುದು, ಬಿಡುವುದು ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ : ಎಚ್.ಸಿ.ಮಹದೇವಪ್ಪ
Update: 2025-01-12 14:29 GMT
ಮೈಸೂರು : "ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದು, ಬಿಡುವುದು ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ" ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯನವರಿಗೆ ರಸ್ತೆಗೆ ಹೆಸರಿಟ್ಟುಕೊಂಡು ಗುರುತಿಸಿಕೊಳ್ಳುವ ಪರಿಸ್ಥಿತಿ ಇದೆಯಾ?. ಸಾಧನೆ ಮಾಡಿದವರು, ಸಮಾಜಮುಖಿ ಕೆಲಸ ಮಾಡಿದವರ ಹೆಸರನ್ನು ವೃತ್ತಕ್ಕೆ, ರಸ್ತೆಗೆ ಇಡುತ್ತಾರೆ" ಎಂದರು.
ʼಯಾರದ್ದೋ ಹೆಸರನ್ನು ತೆಗೆದು ಅವರ ಹೆಸರಿಡುವುದು ಬೇಡ. ಅದರ ಬಗ್ಗೆ ನಾನು ಹೇಳಲ್ಲ, ಇದೆಲ್ಲ ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ. ಹೆಸರಿಡುವ ವಿಚಾರಕ್ಕೆ ಪಟ್ಟು ಹಿಡಿದಿಲ್ಲ. ಹೆಸರಿಡಿ ಎಂದು ಸಿದ್ದರಾಮಯ್ಯನವರು ಸಹ ಕೇಳಿಲ್ಲ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರವನ್ನು ಸ್ಥಳೀಯ ಆಡಳಿತಕ್ಕೆ ಬಿಟ್ಟದ್ದುʼ ಎಂದರು.