ತಲ್ವಾರ್‌ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತೆ: ಕೆ.ಎಸ್.ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ

Update: 2023-10-02 11:57 GMT

ಶಿವಮೊಗ್ಗ, ಅ.2: ʼಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಗುಲಾಮರ ರೀತಿಯಾಗಿದೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆʼ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. 

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು. ಹಿಂದೂ ಸಮಾಜಕ್ಕಾ. ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಯಾಕೆ ಬಿಟ್ಟರು. ಪೊಲೀಸನವರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಇದು ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಂರಿಗೆ ಎಚ್ಚರಿಕೆʼ ಎಂದು ಹೇಳಿದರು.

ʼʼಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಖಡ್ಗ ಹಾಕಿ ಯಾರಿಗೆ ಸ್ಫೂರ್ತಿ ಕೊಡುತ್ತಾರೆ. ಅವರೆಲ್ಲಾ ದೇಶ ದ್ರೋಹಿಗಳು. ಮುಸ್ಲಿಂ ಸಮಾಜ ಹಬ್ಬವನ್ನು ಮಾಡಿಲ್ಲ, ಅವರು ಹಿಂದೂ ಸಮಾಜಕ್ಕೆ ಎಚ್ಚರಿಕೆ ರೀತಿ ಮಾಡಿದ್ದಾರೆ. ಇದೆಲ್ಲಾ ಸರ್ಕಾರಕ್ಕೆ ಗೊತ್ತಿಲ್ಲವೇ?ʼʼ ಎಂದರು.

ʼʼರಾಗಿಗುಡ್ಡಕ್ಕೆ ನಮ್ಮ ಶಾಸಕರು ಹೋಗಿ ಬಂದಿದ್ದಾರೆ. ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಹಿಂದೂ ಮನೆಗಳಿಗೆ ಮಾತ್ರ ಕಲ್ಲು ಹೊಡೆದು, ಒಳ ನುಗ್ಗಿದ್ದಾರೆ. ಮುಸ್ಲಿಂ ಮನೆಗಳಿಗೆ ಯಾವುದೇ ಕಲ್ಲು ಬಿದ್ದಿಲ್ಲ. ಕರ್ತವ್ಯದಲ್ಲಿದ್ದ ಹಲವು ಪೊಲೀಸರಿಗೂ ಕಲ್ಲು ಬಿದ್ದಿದೆ. ಪೊಲೀಸರು ಮೆರವಣಿಗೆಗೆ ಅನುಮತಿ ಕೊಟ್ಟ ರೂಟ್ ಬೇರೆ ಆದರೆ ಅವರು ಹೋಗಿದ್ದೇ ಬೇರೆ. ಸಂಜೆ 6 ಗಂಟೆಗೆ ಮೆರವಣಿಗೆ ಮುಗಿಸಲು ಹೇಳಿದರೂ 7.30 ವರೆಗೂ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ. ಸರ್ಕಾರ ಬದುಕಿದಿಯಾ. ಗೃಹಮಂತ್ರಿಗಳು ಬರಲಿ, ಆ ಏರಿಯಾದ ಮನೆಗಳಿಗೆ ಹೋಗಿ ನೋಡಲಿ. ಸಣ್ಣಪುಟ್ಟ ಗಲಾಟೆ, ತಲ್ವಾರ್ ಹಿಡಿದಿಲ್ಲ ಎನ್ನುವ ಸಚಿವ ಗೃಹಮಂತ್ರಿ ಅಗಲು ಅನ್ ಫಿಟ್, ರಾಜೀನಾಮೆ ಕೊಡಲಿʼʼ ಎಂದು ಒತ್ತಾಯಿಸಿದರು.

ʼʼಶಿವಮೊಗ್ಗದಲ್ಲಿ ಹಿಂದೂ ಸಮಾಜ ಎದ್ದು ನಿಂತರೇ, ಮುಸಲ್ಮಾನ ಸಮಾಜ ಉಳಿಯುತ್ತಾ. ಹಿಂದೂ ಸಮಾಜದ ಯಾರು ಕೂಡ ಕಲ್ಲು ಹೊಡೆದಿಲ್ಲ. ಸಂಘಟನೆಗಳಲ್ಲಿ ಸಕ್ರಿಯರಾದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದಾರೆ. ಮುಸಲ್ಮಾನರ ರಕ್ಷಣೆಗೆ ಮಾತ್ರ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಇರುವುದಾ. ಹಿಂದೂಗಳ ರಕ್ಷಣೆ ಮಾಡಲ್ವಾʼʼ ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News